ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ 
ದೇಶ

ಸಮೀಕ್ಷೆಗಳೆಲ್ಲಾ ಸುಳ್ಳು ಗೆಲ್ಲೋದು ನಾವೇ

`ಸಮೀಕ್ಷೆಗಳಲ್ಲಿ ಹೇಳಿರುವುದೆಲ್ಲ ಸುಳ್ಳು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಮಗೆ 34-38 ಸ್ಥಾನಗಳು...

ನವದೆಹಲಿ:`ಸಮೀಕ್ಷೆಗಳಲ್ಲಿ ಹೇಳಿರುವುದೆಲ್ಲ ಸುಳ್ಳು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಮಗೆ 34-38 ಸ್ಥಾನಗಳು ಸಿಗಲಿವೆ. ಹೀಗಾಗಿ ನಾವೇ ಗೆಲ್ಲುತ್ತೇವೆ'.

ಹೀಗೆಂದು ಹೇಳಿದ್ದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ. ಎಲ್ಲ 70 ಕ್ಷೇತ್ರಗಳಲ್ಲಿ ಪಕ್ಷದ ಸಾಧನೆಯನ್ನು ಅವಲೋಕಿಸಿದ್ದೇವೆ. 2013ರ ಡಿಸೆಂಬರ್‍ನಲ್ಲಿಯೂ ಫಲಿತಾಂಶದ ಬಳಿಕ ಸಮೀಕ್ಷೆಗಳು ಸುಳ್ಳಾಗಿದ್ದವು ಎಂದಿದ್ದಾರೆ.

ಉಪಾಧ್ಯಾಯ. ಮತಗಟ್ಟೆ ಸಮೀಕ್ಷೆಗಳಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಜಯ ಸಾಧಿಸಲಿದೆ ಎಂದು ಗೊತ್ತಾದ ಬಳಿಕ ಭಾನುವಾರ ಸಂಜೆ ಪಕ್ಷದ ನಾಯಕರು ಸಭೆ ನಡೆಸಿದರು. ಅದರಲ್ಲಿ ವ್ಯತಿರಿಕ್ತ  ಫಲಿತಾಂಶ ಬಂದರೆ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ, ನಾಯಕರಾದ ರಾಮ್ ಲಾಲ್, ಪ್ರಭಾತ್ ಝಾ, ವಿಜಯ್ ಗೋಯಲ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಇದೇ ವೇಳೆ 2 ಮತಗಟ್ಟೆ ವ್ಯಾಪ್ತಿಗಳಲ್ಲಿ ಮರು ಮತದಾನಕ್ಕೆ ದೆಹಲಿ ಚುನಾವಣಾ ಆಯೋಗ ಆದೇಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!