ದೇಶ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಜೈಲು ಪಾಲಾದ ಭಾರತೀಯ

ಸಿಂಗಪುರ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಅಪರಾಧಕ್ಕಾಗಿ, ಭಾರತೀಯ ವ್ಯಕ್ತಿಯೊಬ್ಬನಿಗೆ ಸಿಂಗಪುರ...

ಸಿಂಗಪುರ: ಸಿಂಗಪುರ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಕ್ಕಾಗಿ, ಭಾರತೀಯ ವ್ಯಕ್ತಿಯೊಬ್ಬನಿಗೆ ಸಿಂಗಪುರ ಕೋರ್ಟ್ 10 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಪಾರ್ಥಿಬನ್ ಪಾಂಡು(24) ಶಿಕ್ಷೆಗೊಳಗಾದ ಭಾರತೀಯ. ಸಿಂಗಪುರದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಜ. 1 ಹೊಸ ವರ್ಷದ ದಿನದಂದು ವಿದೇಶಿ ಕಾರ್ಮಿಕರ ಕ್ಷೇತ್ರವಾದ ಬೂನ್ ಲೇ ಪ್ರದೇಶದಲ್ಲಿ ಈ ಪ್ರಕರಣ ನಡೆದಿತ್ತು. ಹೊಸ ವರ್ಷದ ಸಡಗರದಲ್ಲಿದ್ದ ಪಾರ್ಥಿಬನ್ ಪಾಂಡು ಆ ರಾತ್ರಿ ಮದ್ಯಾಪಾನ ಮಾಡಿದ್ದ, ಈ ವೇಳೆ ಸ್ಥಳದಲ್ಲಿ 44 ವರ್ಷದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಲೈಂಗಿಕ ಕಿರುಕುಳ ಕೂಡ ನೀಡಿದ್ದ ಎಂದು ಮಾಧ್ಯಮವೊಂದು ವರದಿಮಾಡಿತ್ತು.  

ಈ ಹಿನ್ನೆಲೆಯಲ್ಲಿ ಅಪರಾಧಿ ಪಾಂಡುನನ್ನು ವಶಕ್ಕೆ ಪಡೆದಿದ್ದ ಸಿಂಗಪುರ ಪೊಲೀಸರು ಆತನನ್ನು ಬಂಧನಕ್ಕೊಳಪಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಂಗಪುರ ನ್ಯಾಯಾಲಯವು ಅಪರಾಧಿಯ ತಪ್ಪೊಪ್ಪಿಗೆಯ ಆಧಾರದ ಮೇಲೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಕೋಲಾರ: ಕೃಷಿ ಹೊಂಡದಲ್ಲಿ ಮಕ್ಕಳಿಗೆ ಈಜು ಕಲಿಸುವಾಗ ದುರಂತ; ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ

2028ಕ್ಕೆ 75-80 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು, ಅಧಿಕಾರಕ್ಕೆ- ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ! ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬೆಂಗಳೂರು: ಪೊಲೀಸರ ಭದ್ರತೆ ನಡುವೆ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಅಕ್ರಮ ಮಹಿಳಾ ವಲಸಿಗರು ಪರಾರಿ!

ತುಮಕೂರು: ಹರೆಯದ ಮಗಳನ್ನು ಕೊಂದು, ಶವವನ್ನು ಹೂತಿಟ್ಟ ಕಟುಕ ತಂದೆ!

SCROLL FOR NEXT