ದೇಶ

ಉಗ್ರ ನಿಧಿಗೆ ಭಾರತ, ಅಮೆರಿಕ ಬ್ರೇಕ್

Mainashree

ನವದೆಹಲಿ: ಭಯೋತ್ಪಾದನೆ ನಿಧಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಮಹತ್ವದ ಹೆಜ್ಜೆಯಿಟ್ಟಿದೆ. ಪಾಕ್ ಮೂಲದ ಲಷ್ಕರ್, ಜೆಯುಡಿ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಉಗ್ರ ಚಟುವಟಿಕೆಗೆ ಹಣ ಸಂಗ್ರಹವಾಗುತ್ತಿರುವುದನ್ನು ನಿಲ್ಲಿಸಲು, ಅವರ ಹಣಕಾಸು ಜಾಲದ ಮೇಲೆ ದಾಳಿ ನಡೆಸಲು ಎರಡೂ ರಾಷ್ಟ್ರಗಳು ಕೈಜೋಡಿಸಿವೆ.

ಇವು ಭಯೋತ್ಪಾದನೆ, ಹಣಕಾಸು ಅವ್ಯವಹಾರ ಮತ್ತು ಇತರೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ಒಪ್ಪಂದಕ್ಕೆ ಬಂದಿವೆ. ಅಮೆರಿಕ ಖಜಾನೆ ಕಾರ್ಯದರ್ಶಿ ಜಾಕೋಬ್ ಜೆ.ಲ್ಯೂ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ನಡುವೆ ನಡೆದ ಹಣಕಾಸು ಪಾಲುಗಾರಿಕೆ ಮಾತುಕತೆ ವೇಳೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದೇ ವೇಳೆ, 46ನೇ ರಾಜ್ಯಪಾಲ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನದಲ್ಲಿ ಉಗ್ರರ ಜಾಲ ವಿಸ್ತರಿಸುತ್ತಿರುವುದು ಮತ್ತು ಭಾರತದಲ್ಲಿನ ಉಗ್ರ ಕೃತ್ಯಕ್ಕೆ ಪಾಕ್‌ನ ಪ್ರೇರಣೆ ಭಾರತಕ್ಕೀರುವ ಅತಿದೊಡ್ಡ ಭದ್ರತಾ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT