ದೇಶ

ಸ್ವಚ್ಛ ಭಾರತಕ್ಕೆ ರಾಜ್ಯಪಾಲರು ಮುಂದಾಳತ್ವ ವಹಿಸಲಿ

Mainashree

ನವದೆಹಲಿ: ಸ್ವಚ್ಛ ಭಾರತ ಆಂದೋಲನದ ಮುಂದಾಳತ್ವನ್ನು ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ವಹಿಸಬೇಕೆಂದು ವೆಂಕಯ್ಯನಾಯ್ಡು ಆಗ್ರಹಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರು, ಮಹಾತ್ಮಗಾಂಧಿ, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ನೆನಪಿಗಾಗಿ 2019 ವೇಳೆಗೆ ಎಲ್ಲ ನಗರಗಳ ಸ್ವಚ್ಛತೆಗೆ ಕಾರ್ಯತಂತ್ರ ರೂಪಿಸುವಿಕೆ, ಗುರಿ ಸಾಧಿಸುವಿಕೆ ಅಗತ್ಯ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಪಸ್ಥಿತರಿದ್ದರು.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಲದಿಂದ ಕಾಲಕ್ಕೆ ಅಭಿಯಾನದ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಪ್ರಧಾನಿ ರೂಪಿಸಿರುವ ಜನಾಂದೋಲನಕ್ಕೆ ಹಲವರು ರಾಯಭಾರಿಗಳಾಗಿದ್ದಾರೆ.

ನಗರ ಪ್ರದೇಶಗಳ್ಲಲಿ ಮುಂದಿನ 5 ವರ್ಷಗಳಲ್ಲಿ 1.20 ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗುವುದು. ಅದೇ ರೀತಿ 5 ಲಕ್ಷ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಅಂದಾಜು ರು.62,009 ಕೋಟಿ ಮೀಸಲಿರಿಸಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಶೌಚಾಲಯ ಮತ್ತು ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ರು.4 ಸಾವಿರವನ್ನು ವೈಯಕ್ತಿಕವಾಗಿ ನೀಡಲಾಗುವುದು ಎಂದು ವೆಂಕಯ್ಯನಾಯ್ಡು ತಿಳಿಸಿದರು.

SCROLL FOR NEXT