ಕೇಂದ್ರೀಯ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹಲಾಜ್ ನಿಹಲಾನಿ 
ದೇಶ

ಡಬಲ್ ಮೀನಿಂಗ್ ಪದಗಳು, ರಕ್ತಪಾತದ ಸೀನ್‍ಗಳಿಗೆ ಸೆನ್ಸಾರ್

ಇನ್ನು ಮುಂದೆ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಪದಗಳು, ಮಹಿಳೆಯರ ಮೇಲೆ ದೌರ್ಜನ್ಯ, ರಕ್ತಪಾತದ...

ನವದೆಹಲಿ: ಇನ್ನು ಮುಂದೆ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಪದಗಳು, ಮಹಿಳೆಯರ ಮೇಲೆ ದೌರ್ಜನ್ಯ, ರಕ್ತಪಾತದ ವೈಭವೀಕರಣ ಮಾಡುವಂತಿಲ್ಲ.

ಇದು ಚಿತ್ರ ನಿರ್ಮಾಪಕರಿಗೆ ಸೆನ್ಸಾರ್ ಮಂಡಳಿ ನೀಡಿರುವ ಕಠಿಣ ಮಾರ್ಗಸೂಚಿ. ಶುಕ್ರವಾರ ಕೇಂದ್ರೀಯ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹಲಾಜ್ ನಿಹಲಾನಿ ಅವರು ತಮ್ಮ ಪ್ರಾದೇಶಿಕ ಅಧಿಕಾರಿಗಳಿಗೆ ಈ ಬಗ್ಗೆ ಆದೇಶ ಹೊರಡಿಸಿದ್ದು, ಮಂಡಳಿಯ ಮಾರ್ಗಸೂಚಿಯನ್ನು ಪಾಲಿಸದ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡದಂತೆ ಸೂಚಿಸಿದ್ದಾರೆ.

ಮಾರ್ಗಸೂಚಿಯಲ್ಲಿ ಏನಿದೆ?

ಸೆನ್ಸಾರ್ ಮಂಡಳಿಯು ಕೆಲವೊಂದು ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳನ್ನು ಪಟ್ಟಿ ಮಾಡಿದ್ದು, ಅವುಗಳನ್ನು ಸಿನಿಮಾಗಳಲ್ಲಿ ಬಳಸುವುದಕ್ಕೆ ನಿಷೇಧ ಹೇರಿದೆ. ಅವೆಂದರೆ,
ಸಿನಿಮಾಗಳಲ್ಲಿ ಬಾಂಬೆ ಪದ ಬಳಸುವಂತಿಲ್ಲ. ಅದರ ಬದಲಿಗೆ ಮುಂಬೈ ಎಂದೇ ಬಳಸಬೇಕು.
ಡಬಲ್ ಮೀನಿಂಗ್ ಪದಗಳ ಬಳಕೆಗೆ ನಿಷೇಧ.
ಮಹಿಳಾ ದೌರ್ಜನ್ಯ ಮತ್ತು ರಕ್ತಪಾತದ ವೈಭವೀಕರಣ ಸಲ್ಲ.

ಅಂತಿಮ ನಿರ್ಧಾರವಲ್ಲ
ಸೆನ್ಸಾರ್ ಮಂಡಳಿಯ ಮಾರ್ಗಸೂಚಿ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್, ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಮಂಡಳಿಯ ಮಾರ್ಗಸೂಚಿಯೇ  ಅಂತಿಮವಲ್ಲ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್