ಕರಾಚಿ: ಭಾರತ-ಪಾಕ್ ಪ್ರಧಾನಿಗಳು ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಮಾತುಕತೆ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರವು ಸದ್ಭಾವನೆಯ ಸಂಕೇತವಾಗಿ ಭಾನುವಾರ 172 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
ಬಿಡುಗಡೆಗೊಂಡ ಬೆಸ್ತರು ರೈಲಿನ ಮೂಲಕ ವಾಘಾ ಗಡಿ ತಲುಪಲಿದ್ದಾರೆ ಎಂದು ಮಲೀರ್ ಜೈಲಧಿಕಾರಿ ಹೇಳಿದ್ದಾರೆ.