ಹಿಂದೂ ದೇವಾಲಯ 
ದೇಶ

ಅಮೆರಿಕದ ಶಿವ ದೇವಾಲಯದ ಗೋಡೆ ಮೇಲೆ 'ಗೆಟ್ ಔಟ್‌'!

ವಾಷಿಂಗ್ಟನ್: ವಾಷಿಂಗ್ಟನ್‘ನಲ್ಲಿ ಮಹಾಶಿವರಾತ್ರಿ ಆಚರಣೆಯ ಸಂಭ್ರಮದಲ್ಲಿದ್ದ ಅನಿವಾಸಿ ಭಾರತೀಯರಿಗೆ ಶಾಕ್ ಆಗಿದೆ. ಅಮೆರಿಕದಲ್ಲಿ ಶಿವ ದೇವಾಲಯದ ಗೋಡೆಯೊಂದರ ಮೇಲೆ ದ್ವೇಷಪೂರಿತ ಹೇಳಿಕೆಯನ್ನು ಬರೆಯಲಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

ವಾಷಿಂಗ್ಟನ್‌ನ ಸಿಯಾಟಲ್ ಮೆಟ್ರೋಪಾಲಿಟನ್‌ನಲ್ಲಿರುವ ದೇವಾಲಯದ ಗೋಡೆ ಮೇಲೆ 'ಗೆಟ್ ಔಟ್‌'(ಹೊರಟು ಹೋಗಿ) ಎಂದು ಬರೆಯಾಗಿದ್ದು, ಜತೆಗೆ ಸ್ವಸ್ತಿಕ ಚಿಹ್ನೆಯನ್ನು ಪಕ್ಕದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ದುಷ್ಕರ್ಮಿಗಳು ಅಮೆರಿಕದಲ್ಲಿರುವ ಹಿಂದೂಗಳಿಗೆ ಆಘಾತದ ಸಂದೇಶವನ್ನು ರವಾನಿಸಿದ್ದಾರೆ. ಈ ಸಂಬಂಧ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಖಂಡನೆ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್ ವಾಯುವ್ಯ ಭಾಗದಲ್ಲಿರುವ ಅತಿ ದೊಡ್ಡ ಹಿಂದೂಗಳು ದೇವಾಲಯ ಇದಾಗಿದೆ. ದ್ವೇಷಪೂರಿತ ಹೇಳಿಕೆ ಹಿನ್ನೆಲೆಯಲ್ಲಿ ಅಮೆರಿಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದಿತ್ತು. ಹೊರಟು ಹೋಗುವಂತೆ ಹೇಳಲು ನೀವ್ಯಾರು? ಯುಎಸ್ ವಲಸೆಗಾರರ ರಾಷ್ಟ್ರವಾಗಿದೆ ಎಂದು ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ನಿತ್ಯಾ ನಿರಂಜನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!