ದೇಶ

ಹ್ಯಾಷ್‍ಟ್ಯಾಗ್‍ಗೂ ಕನ್ನಡ ಕಂಪು!

Vishwanath S

ನವದೆಹಲಿ: ಇನ್ನು ಕನ್ನಡದಲ್ಲೂ ಹ್ಯಾಷ್‍ಟ್ಯಾಗ್ ಅವಕಾಶ ಲಭ್ಯವಿದೆ.

ಟ್ವಿಟರ್ ನಲ್ಲಿ ಹ್ಯಾಷ್‍ಟ್ಯಾಗ್ ಇಲ್ಲದೆ ಯಾವುದೇ ವಿಷಯವನ್ನು ಹುಡುಕುವುದು ಸ್ವಲ್ಪ
ಕಷ್ಟವೇ. ಈ ಅವಕಾಶ ಇಂಗ್ಲಿಷ್‍ನಲ್ಲಿ ಬಿಟ್ಟರೆ ಉಳಿದ ಯಾವುದೇ ಭಾಷೆಯಲ್ಲಿ ಇಲ್ಲಿಯವರಿಗೆ ಇರಲಿಲ್ಲ.

ಆದರೆ, ಇದೀಗ ಕೇವಲ ಇಂಗ್ಲಿಷ್ ಅಲ್ಲದೆ, ಕೆಲವು ಪ್ರಾದೇಶಿಕ ಭಾಷೆಗಳಿಗೂ ಹ್ಯಾಷ್ ಸೌಲಭ್ಯ ನೀಡಲಾಗಿದೆ. ಈ ಅವಕಾಶ ಪ್ರಾರಂಭವಾಗಿದ್ದು ಫೆ. 15ರಂದು ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ.

ಮೊದಲು ಹಿಂದಿಯಲ್ಲಿ ಹ್ಯಾಷ್ ಅನ್ನು ಪ್ರಾರಂಭಿಸಲಾಗಿತ್ತು. ಇದೀಗ ಟ್ವಿಟರ್ ಮತ್ತೆ ಕೆಲವು ಪ್ರಾದೇಶಿಕ ಭಾಷೆಗೂ ಈ ಸೌಲಭ್ಯವನ್ನು ವಿಸ್ತರಿಸಿದೆ. ಆದರೆ, ಇದಿನ್ನೂ ಪ್ರಾಥಮಿಕ ಹಂತದಲ್ಲಿದ್ದು, ಕೆಲವೇ ಕೆಲವು ಪದಗಳ ಹುಟುಕಾಟ ನಡೆಸಲಿದೆ.

ಯಾವ ಯಾವ ಭಾಷೆಯಲ್ಲಿ ಲಭ್ಯ?
ದೇವನಾಗರಿ ಲಿಪಿ- (ಹಿಂದಿ, ನೇಪಾಳ, ಮರಾಠಿ, ಸಂಸ್ಕೃತ), ಕನ್ನಡ, ಬೆಂಗಾಲಿ, ಗುಜರಾತಿ, ಪಂಜಾಬಿ, ಓರಿಯಾ, ತಮಿಳು, ಮಲಯಾಳಂ, ತೆಲುಗುಗಳಲ್ಲಿ ಹ್ಯಾಷ್ ಸೌಲಭ್ಯ ನೀಡಲಾಗಿದೆ.

ಏನಿದು ಹ್ಯಾಷ್‍ಟ್ಯಾಗ್?
ಹೆಸರೇ ಹೇಳುವಂತೆ ಇದು ಹ್ಯಾಷ್(#) ಚಿಹ್ನೆಯನ್ನು ಸೂಚಿಸುವ ಪದ. ಹ್ಯಾಷ್‍ಟ್ಯಾಗ್ ಎನ್ನುವುದು ಸ್ಪೇಸ್ ಇಲ್ಲದ ಒಂದು ಪದ ಅಥವಾ ಪುಟ್ಟ ವಾಕ್ಯವಾಗಿದ್ದು, ವಾಕ್ಯದ ಮುಂದೆ ಹ್ಯಾಷ್(#) ಚಿಹ್ನೆ ಸೇರಿಸಿ ಅದನ್ನು ಲೇಬಲ್ ಎಂದು ಹೆಸರಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಮೆಟಾಡಾಟಾ ಟ್ಯಾಗ್ ಇದ್ದಂತೆ. ಫೇಸ್‍ಬುಕ್, ಗೂಗಲ್ ಪ್ಲಸ್, ಇನ್‍ಸ್ಟಾಗ್ರಾಂ, ಟ್ವಿಟರ್ ಅಥವಾ ವಿಕೆ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಪದಗಳು ಅಥವಾ ಸಂದೇಶಗಳುಳ್ಳ ವಾಕ್ಯಗಳನ್ನು, ಅವುಗಳ ಮುಂದೆ # ಸೇರಿಸಿ ಟ್ಯಾಗ್ ಮಾಡಬಹುದಾಗಿದೆ.
ಉದಾ: #Worldcup2015

ಹ್ಯಾಷ್‍ಟ್ಯಾಗ್‍ನ ಕೆಲಸ?
ಒಂದೇ ವಿಚಾರಕ್ಕೆ ಸಂಬಂಧಿಸಿದ ಸಂದೇಶಗಳನ್ನು ಗ್ರೂಪ್ ಮಾಡುವ ಕೆಲಸವನ್ನು ಹ್ಯಾಷ್‍ಟ್ಯಾಗ್ ಮಾಡುತ್ತದೆ. ಜತೆಗೆ, ನಿರ್ದಿಷ್ಟ ಪದವಿರುವ ಎಲ್ಲ ಸಂದೇಶಗಳ ಎಲೆಕ್ಟ್ರಾನಿಕ್ ಹುಡುಕಾಟವನ್ನೂ ಮಾಡುತ್ತದೆ. ಮೊದಲು ಹಿಂದಿಯಲ್ಲಿ ಹ್ಯಾಷ್ ಅನ್ನು ಪ್ರಾರಂಭಿಸಲಾಗಿತ್ತು. ಇದೀಗ ಟ್ವಿಟರ್ ಮತ್ತೆ ಕೆಲವು ಪ್ರಾದೇಶಿಕ ಭಾಷೆಗೂ ಈ ಸೌಲಭ್ಯವನ್ನು ವಿಸ್ತರಿಸಿದೆ. ಆದರೆ, ಇದಿನ್ನೂ ಪ್ರಾಥಮಿಕ ಹಂತದಲ್ಲಿದ್ದು, ಕೆಲವೇ ಕೆಲವು ಪದಗಳ ಹುಟುಕಾಟ ನಡೆಸಲಿ.

SCROLL FOR NEXT