ದೇಶ

ಸೈಕ್ಲೋನ್ ಅಬ್ಬರ: ಜನರ ಜೀವನ ಅಸ್ತವ್ಯಸ್ಥ

ಸಿಡ್ನಿ: ಈಶಾನ್ಯ ಆಸ್ಟ್ರೇಲಿಯಾದಲ್ಲಿ ಅಪ್ಪಳಿಸಿರುವ ಸೈಕ್ಲೋನ್ ಚಂಡಮಾರುತದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಂಡಮಾರುತದ ಪ್ರಭಾವದಿಂದಾಗಿ ಈಗಾಗಲೇ ಅಲ್ಲಿನ ಹಲವು ಪ್ರದೇಶಗಳು ಜಲಾವೃತ್ತಗೊಂಡಿದ್ದು, ಮರಗಿಡಗಳು ಧರೆಗುರುಳಿದಿದೆ. ಚಂಡಮಾರುತದ ಅಬ್ಬರಕ್ಕೆ ಅಲ್ಲಿನ ಬಹುತೇಕ ಕಟ್ಟಡಗಳು ಕುಸಿದಿದ್ದು, ವಿದ್ಯುತ್ ಪ್ರಸರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸೈಕ್ಲೋನ್ ಚಂಡಮಾರುತ ಗಂಟೆಗೆ 285 ಕಿಮೀ ವೇಗದಲ್ಲಿ ಬೀಸುತ್ತಿದ್ದು, ಇದನ್ನು ವರ್ಗ 5ಕ್ಕೆ ಸೇರಿಸಲಾಗಿದೆ. ವಿಶ್ವದ ಶಕ್ತಿ ಶಾಲಿ ಚಂಡಮಾರುತಗಳಲ್ಲಿ ಇದೂ ಸಹ ಒಂದಾಗಿದ್ದು. ಭಾರಿ ಅನಾಹುತ ಉಂಟುಮಾಡಲಿದೆ. ಇದರ ವ್ಯಾಪ್ತಿ ಪ್ರದೇಶ ಹಾಗೂ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಈಗಾಗಲೇ ಅಲ್ಲಿನ ಜನರನ್ನು ಮನೆಯಿಂದ ಹೊರಗೆ ಬರದಿರುವಂತೆ ಸೂಚನೆ ನೀಡಲಾಗಿದೆ. ಕರಾವಳಿ ತೀರ ಪ್ರದೇಶ ತೀರ ಅಪಾಯದಲ್ಲಿದ್ದು, ಅಲ್ಲಿನ ಜನರನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಅಧಿಕಾರಿಗಳಿಗೆ ಕಟ್ಟೆಚ್ಚರವಹಿಸುವಂತೆ ತಿಳಿಸಲಾಗಿದೆ ಎಂದು ಅಲ್ಲಿನ ಸಚಿವರೊಬ್ಬರು ತಿಳಿಸಿದ್ದಾರೆ.

SCROLL FOR NEXT