ದೇಶ

ಅಶ್ಲೀಲ ಚಿತ್ರ ಪೋಸ್ಟ್ ತಡೆಗೆ ಮುಂದಾಗದ ಟ್ವೀಟರ್

Vishwanath S

ನ್ಯೂಯಾರ್ಕ್: ಪ್ರತಿದಿನ ಕನಿಷ್ಠ 5 ಲಕ್ಷ ಪೋರ್ನ್ ಚಿತ್ರಗಳು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದ್ದು, ಅಶ್ಲೀಲ ಚಿತ್ರ ಮುಕ್ತ ಮಾಡಲು ಟ್ವೀಟರ್ ಯಾವುದೇ ಕೈಗೊಂಡಿಲ್ಲ ಎಂದು ವರಿದಿಯೊಂದು ಹೇಳಿದೆ.

ಟ್ವಿಟ್ಟರ್ನಲ್ಲಿ ಪೋರ್ನ್ ಚಿತ್ರಗಳ ಆರ್ಭಟ ಹೆಚ್ಚಾಗಿದ್ದು, ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೂ ಟ್ವೀಟರ್ ಕಂಪನಿ ಮಾತ್ರ ಈ ಚಿತ್ರಗಳನ್ನು ಮಕ್ಕಳು ನೋಡದಂತೆ ಮಾಡಲು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇಂತ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಪೋರ್ನೋಗ್ರಾಫರ್‌ಗಳು ಮೈಕ್ರೋ ಬ್ಲಾಗಿಂಗ್ ಮೂಲಕ ಮಕ್ಕಳನ್ನು ಗುರಿಯಾಗಿಸಿಕೊಂಡಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

ಆನ್‌ಲೈನ್ ಕಾಮಪ್ರಚೋದಕ ಚಿತ್ರಗಳು ಗಂಭೀರ ಸಮಸ್ಯೆಯಾಗಿದ್ದು, ಪೋರ್ನ್ ವೆಬ್ ಸೈಟ್ ಗಳನ್ನು ನಿಭಾಯಿಸುವ ಸಲುವಾಗಿ ಫೇಸ್‌ಬುಕ್ ಮತ್ತು ಗೂಗಲ್ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದ್ದು, ಆ ಸಭೆಗೆ ಹಾಜರಾಗಲು ಟ್ವಿಟ್ಟರ್ ಮಾತ್ರ ಹಿಂದೇಟು ಹಾಕುತ್ತಿದ್ದು, ಟ್ವಿಟ್ಟರ್ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಹೆಲೇನ್ ಗುಡ್ ಮಾನ್ ಹೇಳಿದ್ದಾರೆ.

ಪ್ರಚಾರಕರು ಟ್ವಿಟ್ಟರ್ ಸಿನಿಕ ವರ್ತನೆ ತೋರಿದ್ದು, ಈ ಬಗ್ಗೆ ಕ್ರಮಕ್ಕೆ ವಿಫಲವಾಗಿ ಹೇಡಿತನ ಪ್ರದರ್ಶಿಸಿದೆ ಎಂದು ದೂರಿದ್ದಾರೆ.ಪೋರ್ನ್ ಚಿತ್ರಗಳು ಚಿಕ್ಕಮಕ್ಕಳ ಮೇಲೆ ಹಾನಿಕರ ದುಷ್ಪರಿಣಾಮ ಬೀರುತ್ತಿದೆ ಎಂದು ಚೈಲ್ಡ್ ಇಂಟರ್ನೆಟ್ ಸೇಫ್ಟಿ ಯುಕೆ ಮಂಡಲಿಯ ಜಾನ್ ಕಾರ್ ಹೇಳಿದ್ದಾರೆ.

SCROLL FOR NEXT