ದೇಶ

ಗೌಪ್ಯ ಮಾಹಿತಿ ಸೋರಿಕೆ: ಮತ್ತೋರ್ವ ಆರೋಪಿ ಬಂಧನ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವ ದಾಖಲೆಗಳನ್ನು ಕದ್ದು ಪ್ರಮುಖ ತೈಲ ಕಂಪನಿಗಳು ಹಾಗೂ ಸ್ವತಂತ್ರ ಸಲಹೆಗಾರರಿಗೆ ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರಕ್ಷಣಾ ಸಚಿವಾಲಯದ ಕೆಲಸಗಾರನೊಬ್ಬನನ್ನು ಮಂಗಳವಾರ ಬಂಧಿಸಿದ್ದಾರೆ.

ವೀರೇಂದ್ರ ಕುಮಾರ್ ಎಂಬಾತ ರಕ್ಷಣಾ ಸಚಿವಾಲಯದ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ. ಈತ ನಕಲಿ ಗುರುತಿನ ಚೀಟಿಯೊಂದಿಗೆ ಗೌಪ್ಯ ಮಾಹಿತಿಯ ದಾಖಲೆಗಳನ್ನು ಲಲ್ತಾ ಪ್ರಸಾದ್ ಎಂಬುವವರಿಗೆ ನೀಡುತ್ತಿದ್ದರು ಎಂಬ ಆರೋಪದ ಮೇಲೆ ಪೊಲೀಸರು ವೀರೇಂದ್ರ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ಮಹತ್ವದ ದಾಖಲೆಗಳನ್ನು ಕದ್ದು ತೈಲ ಕಂಪನಿ ಹಾಗೂ ಖಾಸಗಿ ಸಲಹೆಗಾರರಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದ ಈ ದಂಧೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿತ್ತು. ಈ ವಿದ್ರೋಹದ ವ್ಯವಹಾರದಲ್ಲಿ ಸುಮಾರು 9 ತೈಲ ಕಂಪನಿಗಳು ಭಾಗಿಯಾಗಿರುವುದಾಗಿ ಕಂಡು ಬಂದಿ ಹಿನ್ನೆಲೆಯಲ್ಲಿ, ಪೊಲೀಸರು ದೆಹಲಿಯಾದ್ಯಂತ ಹಲವು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈವರೆಗೂ 13 ಆರೋಪಿಗಳನ್ನು ಬಂಧಿಸಲಾಗಿದೆ.

SCROLL FOR NEXT