ದೇಶ

ವಿಜ್ಞಾನಿಗಳು ಭಾರತದ ಹೆಮ್ಮೆ: ನರೇಂದ್ರ ಮೋದಿ

ನವದೆಹಲಿ: ಸಂಶೋಧನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವಿಜ್ಞಾನಿಗಳು ಭಾರತದ ಹೆಮ್ಮೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಅವರು,  ಸಂಶೋಧನೆ ಕುರಿತ ವಿಜ್ಞಾನಿಗಳ ಸಮರ್ಪಣೆ, ಸಂಕಲ್ಪ ಮತ್ತು ಕರ್ತವ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ವಿಜ್ಞಾನಿಗಳು ದೇಶದ ಹೆಮ್ಮೆಯ ಪ್ರತೀಕ ಎಂದು ಹೇಳಿದ್ದಾರೆ.

ನಾವೀನ್ಯತೆ ಹಾಗೂ ಶ್ರೇಷ್ಠತೆ ಕುರಿತ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಸಂಶೋಧನೆ ಕೈಗೊಂಡಿದೆ. ವಿಜ್ಞಾನ ಹಾಗೂ ತಂತ್ರಜ್ಞಾನಗಳು ಭಾರತದ ಮುಂದಿನ ಭವಿಷ್ಯವಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ಭಾರತದಲ್ಲಿ ಮುಂದುವರೆಯುತ್ತಿರುವುದರಿಂದಲೇ ಭಾರತ ಇಂದು ಈ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಭಾರತ ಈ ಸ್ಥಾನದಲ್ಲಿರಲು ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ಅವರು ಪ್ರಮುಖ ಪಾತ್ರವಹಿಸಿದ್ದು, ವಿಜ್ಞಾನ ಕುರಿತ ಅವರ ಸಮರ್ಪಣೆಗೆ ಸಲ್ಯೂಟ್ ಮಾಡಲೇಬೇಕು ಎಂದು ಹೇಳಿದ್ದಾರೆ. 

SCROLL FOR NEXT