ದೇಶ

ಬ್ಲ್ಯಾಕ್ ಬಾಕ್ಸ್ ಪತ್ತೆಗೆ ವಾರ ಕಾಯಬೇಕು!

Lakshmi R

ಜಕಾರ್ತ/ಸಿಂಗಾಪುರ: ಅನುಮಾನಾಸ್ಪದ ರೀತಿಯಲ್ಲಿ ಪತನಗೊಂಡಿರುವ ಇಂಡೋನೇಷ್ಯಾದ ಏರ್ ಏಷ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಗೆ ವಾರ ಕಾಲ ಕಾಯುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾವಾ ಸಮುದ್ರದಲ್ಲಿ ಪತನಗೊಂಡಿದೆ ಎನ್ನಲಾಗಿರುವ ಈ ವಿಮಾನದ ಹುಡುಕಾಟಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ಸಮುದ್ರದಲ್ಲಿ ಭಾರಿ ಎತ್ತರದ ಅಲೆಗಳು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ವಿಮಾನದ ಅವಶೇಷ ಪತ್ತೆಹಚ್ಚುವುದು ಕಷ್ಟವಾಗುತ್ತಿದೆ.

ಸಮುದ್ರ ಶಾಂತಗೊಂಡ ಬಳಿಕವಷ್ಟೇ ಪತ್ತೆ ಕಾರ್ಯ ಚುರುಕುಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಶವಪತ್ತೆ: ಈ ನಡುವೆ, ಇಂಡೋನೇಷ್ಯಾದ ಪೆಂಗ್‌ಕಲಾನ್ ಕಡಲ ತೀರದಿಂದ 70ಕಿ.ಮೀ. ದೂರದಲ್ಲಿ ಮತ್ತೊಂದು ಶವ ಪತ್ತೆಯಾಗಿದ್ದು, ಈ ಮೂಲಕ ಒಟ್ಟು 8 ಮಂದಿ ಶವ ಪತ್ತೆಯಾದಂತಾಗಿದೆ. ದುರಂತಕ್ಕೀಡಾದ ಏರ್‌ಏಷ್ಯಾ ವಿಮಾನದಲ್ಲಿ 155 ಮಂದಿ ಪ್ರಯಾಣಿಸಿದ್ದರು.

SCROLL FOR NEXT