ಲಖನೌ: ಭಾರತ ರತ್ನ ಗೌರವ ನೀಡುವಲ್ಲಿ ದಲಿತರನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯರಿಗೆ ಅತ್ಯುನ್ನತ ಗೌರವ ನೀಡುವ ವೇಳೆ ಬಿಎಸ್‌ಪಿ ಸಂಸ್ಥಾಪಕ ಕಾನ್ಶೀರಾಮ್ ಅವರನ್ನೂ ಭಾರತ ರತ್ನಕ್ಕಾಗಿ ಪರಿಗಣಿಸಬಹುದಿತ್ತು ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ದೂರಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಯುಪಿಎ ಸರ್ಕಾರ ಕೂಡ ದಲಿತ ವಿರೋಧಿ ನಿಲುವನ್ನು ಅನುಸರಿಸಿತ್ತು. ಹಾಲಿ ಸರ್ಕಾರ ಕೂಡ ಅದನ್ನೇ ಮುಂದುವರಿಸಿದೆ ಎಂದು ಮಾಯಾವತಿ ದೂರಿದರು.
ಕಾನ್ಶೀರಾಮ್, ಜ್ಯೋತಿಬಾ ಪುಲೆ ಅವರು ದಲಿತರು, ಹಿಂದುಳಿದ ವರ್ಗದವರ ಅಭ್ಯುದಯಕ್ಕಾಗಿ ಅಹರ್ನಿಸಿ ಶ್ರಮಿಸಿದ್ದಾರೆ. ಹೀಗಾಗಿ, ಈ ಇಬ್ಬರು ನಾಯಕರಿಗೆ ದೇಶದ ಅತ್ಯುನ್ನತ ಗೌರವ ನೀಡಬಹುದಿತ್ತು ಎಂದಿದ್ದಾರೆ ಬಿಎಸ್‌ಪಿ ನಾಯಕಿ.