ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ ಮೊದಲ ಸ್ಮಾರ್ಟ್ ಸಿಟಿ ನಿರ್ಮಾಣವಾಗಲಿದೆ. ಇದರ ಜತೆಗೆ ಅದು 'ಗ್ಲೋಬಲ್ ಸಿಟಿ' ಕೂಡ ಆಗಲಿದೆ. ಇದರಿಂದಾಗಿ ಹಲವು ಮೂಲಭೂತ ಸಮಸ್ಯೆಗಳಿಂದ ಜರ್ಝರಿತವಾಗಿರುವ ದೆಹಲಿಯನ್ನು ಮುಕ್ತಗೊಳಿಸುವ ಪ್ರಯತ್ನ ನಡೆಯಲಿದೆ.
ಈಗಾಗಲೇ ವಿಶ್ವದ ಪ್ರಮುಖ ನಗರಗಳ ಪಟ್ಟಿ ಪ್ರಾಮುಖ್ಯತೆ ಪಡೆದಿರುವ ರಾಷ್ಟ್ರ ರಾಜಧಾನಿಯಲ್ಲಿ ಡಿಸ್ನಿಲ್ಯಾಂಡ್, ಯುನಿವರ್ಸಲ್ ಸ್ಟುಡಿಯೋಗಳಂಥ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಮುಪ್ಪಾವರಪು ವೆಂಕಯ್ಯನಾಯ್ಡು ತಿಳಿಸಿದ್ದಾರೆ.
ಈ ಮೂಲಕ ಅದನ್ನು ಲಂಡನ್, ಸ್ಯಾನ್ ಫ್ರಾನ್ಸಿಸ್ಕೋ ನಗರಗಳಂತೆ ನಿರ್ಮಿಸಲಾಗುತ್ತದೆ ಎಂದಿದ್ದಾರೆ. ಮೋದಿ ಸರ್ಕಾರ ದೇಶದಲ್ಲಿ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ವಾಗ್ದಾನ ಮಾಡಿತ್ತು.