ಶೋಧ ಕಾರ್ಯದಲ್ಲಿ ತೊಡಗಿರುವ ನೌಕಾಪಡೆಯ ಸಿಬ್ಬಂದಿ (ಸಂಗ್ರಹ ಚಿತ್ರ) 
ದೇಶ

ಏರ್ ಏಷ್ಯಾ ದುರಂತ: ವಿಮಾನ ಅವಶೇಷ ಪತ್ತೆ

ಏರ್ ಏಷ್ಯಾ ವಿಮಾನದ ಶೋಧ ಕಾರ್ಯಾಚರಣೆ ಕೈಗೊಂಡಿರುವ ತಂಡಕ್ಕೆ ಸಮುದ್ರದಲ್ಲಿ ವಿಮಾನವನ್ನು ಹೋಲುವ ದೊಡ್ಡ ವಸ್ತುವೊಂದು ಕಂಡುಬಂದಿದೆ.

ಜಕಾರ್ತ: ಕಳೆದವಾರ ದುರಂತಕ್ಕೀಡಾಗಿದ್ದ ಏರ್ ಏಷ್ಯಾ ವಿಮಾನದ ಶೋಧ ಕಾರ್ಯಾಚರಣೆ ಕೈಗೊಂಡಿರುವ ತಂಡಕ್ಕೆ ಸಮುದ್ರದಲ್ಲಿ ವಿಮಾನವನ್ನು ಹೋಲುವ ದೊಡ್ಡ ವಸ್ತುವೊಂದು ಕಂಡುಬಂದಿದೆ.

ಮೂಲಗಳ ಪ್ರಕಾರ ಇಂಡೋನೇಷ್ಯಾ ಸರ್ಕಾರ ಶೋಧಕ್ಕಾಗಿ ಗುರುತು ಮಾಡಿಕೊಂಡಿರುವ ಸಮುದ್ರ ಪ್ರದೇಶದಲ್ಲಿಯೇ ಈ ಶಂಕಿತ ವಸ್ತು ಕಂಡಬಂದಿದ್ದು, ಶೋಧ ಕಾರ್ಯದಲ್ಲಿ ತೊಡಗಿರುವ ಅತ್ಯಾಧುನಿಕ ವಿಮಾನ ಈ ವಸ್ತುವನ್ನು ಪತ್ತೆ ಹಚ್ಚಿದೆ. ಪ್ರಸ್ತುತ ಸ್ಥಳಕ್ಕೆ ನೌಕಾಪಡೆಯ 9 ಹಡಗುಗಳನ್ನು ರವಾನೆ ಮಾಡಲಾಗಿದ್ದು, ಪ್ರಸ್ತುತ ದೊರೆತಿರುವ ವಸ್ತು ವಿಮಾನದ ಅವಶೇಷವೇ ಆಗಿದ್ದರೆ ಈ ವರೆಗೂ ದೊರೆತಿರುವ ವಿಮಾನದ ಅವಶೇಷಗಳ ಸಂಖ್ಯೆ ಐದಕ್ಕೆ ಏರುತ್ತದೆ.

ಪ್ರಸ್ತುತ ಸಮುದ್ರದಲ್ಲಿ ಗೋಚರಿಸಿರುವ ಶಂಕಿತ ವಸ್ತು ಸುಮಾರು 9.8 ಮೀ.ಉದ್ದವಿದ್ದು, 1.1 ಮೀ. ಅಗಲವಿದೆ. ಬಹುತೇಕ ಇದು ವಿಮಾನವನ್ನು ಹೋಲುತ್ತಿದ್ದು, ನಾಪತ್ತೆಯಾದ ಏರ್ ಏಷ್ಯಾ ಸಂಸ್ಥೆಯ A320-200 ವಿಮಾನದ ಅವಶೇಷವಾಗಿರಬಹುದು ಎಂದು ಶಂಕಿಸಲಾಗುತ್ತಿದೆ.

ಕಳೆದ ಡಿಸೆಂಬರ್ 28ರಂದು ಸೊರಬಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರದೆಡೆಗೆ ಟೇಕ್ ಆಫ್ ಅಗಿದ್ದ A320-200 ವಿಮಾನ, ಕೆಲ ಗಂಟೆಗಳಲ್ಲೇ ವಾಯುಸಂಚಾರ ಗೋಪುರದ ಸಂಪರ್ಕವನ್ನು ಕಡಿದುಕೊಂಡಿತ್ತು.

ಬಳಿಕ ಕಳೆದ ಮಂಗಳವಾರ ವಿಮಾನದ ಅವಶೇಷ ಪತ್ತೆಯಾಗಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಈ ವರೆಗೂ ನಡೆದ ಶೋಧ ಕಾರ್ಯದಲ್ಲಿ ಸುಮಾರು 31 ಪ್ರಯಾಣಿಕರ ಮೃತದೇಹಳಗನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಪ್ರಯಾಣಿಕರ ಮೃತ ದೇಹ ಮತ್ತು ವಿಮಾನದ ಅವಶೇಷಗಳಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್: ಪರಸ್ಪರ ಆಲಿಂಗನ, ಒಟ್ಟಿಗೆ ಬ್ರೇಕ್ ಫಾಸ್ಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT