ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಪೂರ್ಣ ಸಚಿವ ಸಂಪುಟದ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಂಪುಟ ಸಚಿವರು ಮತ್ತು ಸಹಾಯಕ ಸಚಿವರ ಆರು ತಿಂಗಳ ಕಾರ್ಯವೈಖರಿಯ ಬಗ್ಗೆ ಮೌಲ್ಯಮಾಪನ ನಡೆಸಲಿದ್ದಾರೆ.
ಇದರ ಜತೆಗೆ ಆಯಾ ಸಚಿವರಿಗೆ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಸಂಜೆಯ ವೇಳೆಗೆ ಈ ಸಭೆ ನಡೆಯಲಿದೆ. ಆದರೆ ಸಂಪುಟ ಸದಸ್ಯರಿಗೆ ಯಾವುದೇ ರೀತಿಯ ಅಜೆಂಡಾ ವಿತರಿಸಲಾಗಿಲ್ಲ.
ಪ್ರತಿ ಬುಧವಾರ ಸಂಪುಟ ಸಬೆ ನಡೆಸುವುದರ ಜತೆಗೆ ಆಗಾಗ ಸಂಪೂರ್ಣ ಸಂಪುಟ ಸಭೆ ನಡೆಸಿ ಪ್ರಧಾನಿ ಮೋದಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.