ದೇಶ

ಭಾರತದ ಗಿಫ್ಟ್ ಸಂಗ್ರಹ ಬೆಲೆ 3.60 ಕೋಟಿ!

ಭಾರತದ ನಗರಗಳ ಪ್ರತಿ ನಾಲ್ವರಲ್ಲಿ ಮೂವರು ಅನಗತ್ಯ ಉಡುಗೊರೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಅದರ ಬೆಲೆ 3.60 ಕೋಟಿಯಷ್ಟಿದೆ. ಅಲ್ಲದೆ ತಾವು ಪಡೆದದ್ದನ್ನು ಬೇರೊಬ್ಬರಿಗೆ ಉಡುಗೊರೆ ನೀಡುವ ರೂಢಿ ಇತ್ತೀಚಿಗೆ ಹೆಚ್ಚುತ್ತಿದೆ.

ಐವರಲ್ಲಿ ಒಬ್ಬರು ತಮಗ ಬೇಡವಾದ  ಉಡುಗೊರೆಗಳನ್ನು ಮತ್ತೊಬ್ಬರಿಗೆ ನೀಡುತ್ತಾರೆ ಎಂಬುದು ಆನ್‌ಲೈನ್ ಮಾರಾಟ ಸಂಸ್ಥೆ ಓಎಲ್‌ಎಕ್ಸ್.ಇನ್ ಸಮೀಕ್ಷೆಯಿಂದ ತಿಳಿದುಬಂದಿದೆ.

ಬೇರೆ ನಗರಗಳಿಗೆ ಹೋಲಿಸಿದಲ್ಲಿ ಸಿಲಿಕಾನ್ ಸಿಟಿಯಲ್ಲಿ ಪ್ರತಿ ಐವರಲ್ಲಿ ಮೂವರು ಉಡುಗೊರೆಗಳನ್ನು ಬೇರೆಯವರಿಗೆ ನೀಡುತ್ತಾರೆ. ಇದರಿಂದ ನಿರಾಳ ಭಾವ ಹೊಂದುತ್ತೇವೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಓಎಲ್‌ಎಕ್ಸ್ ಸಂಸ್ಥೆ ಹಾಗೂ ಐಎಂಆರ್‌ಬಿ ಇಂಟರ್‌ನ್ಯಾಷನಲ್ ಇತ್ತೀಚೆಗೆ ಜಂಟಿಯಾಗಿ 'ಗಿಫ್ಟ್ ಮಿ ನಾಟ್‌' ಎಂಬ ಸಮೀಕ್ಷೆಯೊಂದನ್ನು ನಡೆಸಿತ್ತು. ಅದರಲ್ಲಿ ಶೇ.9ರಷ್ಟು ಮಂದಿ ದಾನ ಮಾಡುತ್ತಾರೆ. ಶೇ.3ರಷ್ಟು ಮಂದಿ ತಮಗೆ ಇಷ್ಟವಾಗದ ಉಡುಗೊರೆಯನ್ನು ಮಾರುತ್ತಾರೆ  ಎನ್ನಲಾಗಿದೆ. ಇಂಥ ವಸ್ತುಗಳ ಬೆಲೆ ಸರಾಸರಿ 100 ಎಂದರು. ದೇಶದ ಪ್ರತಿ ಮನೆಯಲ್ಲಿ ಬಳಸದೇ ಇರುವ ವಸ್ತುಗಳ ಬೆಲೆ ಮೂರು ಕೋಟಿ ದಾಟಿದೆ ಎನ್ನಲಾಗಿದೆ.

SCROLL FOR NEXT