ದೇಶ

ಬಜೆಟ್ ಅನುದಾನ ಸಮಾನವಾಗಿ ವ್ಯಯಿಸಿ: ಸಚಿವರಿಗೆ ಪ್ರಧಾನಿ

ಪ್ರತಿ ಸಚಿವಾಲಯ ಕೂಡ ಬಜೆಟ್‌ನಲ್ಲಿ ನೀಡಲಾಗುವು ಅನುದಾನವನ್ನು ವರ್ಷಪೂರ್ತಿ...

ನವದೆಹಲಿ: ಪ್ರತಿ ಸಚಿವಾಲಯ ಕೂಡ ಬಜೆಟ್‌ನಲ್ಲಿ ನೀಡಲಾಗುವು ಅನುದಾನವನ್ನು ವರ್ಷಪೂರ್ತಿ ಸಮಾನವಾಗಿ ಬಳಿಸಿಕೊಳ್ಳಬೇಕು. ವರ್ಷದ ಕೊನೆಗೆ ಎಚ್ಚೆತ್ತು ತರಾತುರಿಯಿಂದ ಹಣವನ್ನು ವ್ಯಯಿಸುವುದು ಸಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವರಿಗೆ ನೀಡಿರುವ ಖಡಕ್ ಎಚ್ಚರಿಕೆ.

ಬಜೆಟ್ ಅಧಿವೇಶನಕ್ಕೆ ಒಂದು ತಿಂಗಳು ಬಾಕಿಯಿರುವಾಗಲೇ ಅಂದರೆ ಸೋಮವಾರ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಧಾನಿ ಮೋದಿ ಅವರು ಸಂಪುಟ ಸಚಿವರು ಮತ್ತು ಸಹಾಯಕ ಸಚಿವರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ, ವೆಬ್ ಪೋರ್ಟ್‌ಲ್‌ಗಳ ಮೂಲಕ ಬಜೆಟ್ ಬಗ್ಗೆ ಜನಸಾಮಾನ್ಯರ ಅಭಿಪ್ರಾಯವನ್ನೂ ಕೇಳುವ ಮೂಲಕ ಅವರನ್ನೂ ಬಜೆಟ್‌ನಲ್ಲಿ ಪಾಸ್ಗೊಳ್ಳುವಂತೆ ಮಾಡಿ ಎಂದು ಸೂಚಿಸಿದರು.

ಈ ರೀತಿ ಜನಸಾಮಾನ್ಯರನ್ನು ಗಣನೆಗೆ ತೆಗೆದುಕೊಂಡ ಕಾರಣದಿಂದಲೇ ಸ್ವಚ್ಛ ಭಾರತ ಅಭಿಯಾನವು ಯಶಸ್ವಿಯಾಯಿತು ಎಂದೂ ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಚಿವಾಲಯಗಳು ಈಗಾಗಲೇ ಸಿದ್ಧಪಡಿಸಿರುವ ಇ-ಬುಕ್‌ಗಳನ್ನು ಪ್ರದರ್ಶಿಸಿದ ಪ್ರಧಾನಿ, ಇಂತಹುದರ ಮೂಲಕವೇ ಸರ್ಕಾರವು ಪಾರದರ್ಶಕತೆಯ ಗುರಿಯನ್ನು ತಲುಪಲು ಸಾಧ್ಯ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!