ದೇಶ

ಪಾಕ್ ಹಡಗು ಸ್ಫೋಟದ ಹಿಂದೆ ಲಷ್ಕರ್ ಕೈವಾಡ: ಗುಪ್ತಚರ ಇಲಾಖೆ ಶಂಕೆ

ಪೋರ್‌ಬಂದರ್ ಬಳಿ ಪಾಕಿಸ್ತಾನದ ಹಡುಗು ಸ್ಫೋಟಗೊಂಡಿರುವುದರ ಹಿಂದೆ ಲಷ್ಕರ್-ಇ-ತೋಯ್ಬಾ...

ನವದೆಹಲಿ: ಪೋರ್‌ಬಂದರ್ ಬಳಿ ಪಾಕಿಸ್ತಾನದ ಹಡುಗು ಸ್ಫೋಟಗೊಂಡಿರುವುದರ ಹಿಂದೆ ಲಷ್ಕರ್-ಇ-ತೋಯ್ಬಾ ಕೈವಾಡವಿರಬಹುದು ಎಂದು ಗುಪ್ತಚರ ಇಲಾಖೆ ಶಂಕಿಸಿದೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 31ರಂದು ತಡರಾತ್ರಿ ಗುಜರಾತ್‌ನ ಪೋರಬಂದರ್‌ನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡಿದ್ದ ಪಾಕಿಸ್ತಾನದ ಹಡಗು ಸ್ಫೋಟಗೊಂಡಿತ್ತು. ಇದನ್ನು ಪಾಕ್ ಮೂಲದ ಉಗ್ರರು ಸ್ಫೋಟಿಸಿದ್ದಾರೆ ಎಂದು ಹೇಳಲಾಗುತಿತ್ತು. ತದ ನಂತರ ಈ ಹಡಗು ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಮಾಹಿತಿ ಹೊರಬಿತ್ತು. ಆದರೆ, ಭಾರತದ ವರದಿಯನ್ನು ಪಾಕ್ ಸರ್ಕಾರ ತಳ್ಳಿ ಹಾಕಿತ್ತು.

ಇದೀಗ ಈ ಹಡಗು ಸ್ಫೋಟದ ಹಿಂದೆ ಲಷ್ಕರ್-ಇ-ತೋಯ್ಬಾದ ಕೈವಾಡವಿದೆ ಎಂದು ಗುಪ್ತಚರ ಇಲಾಖೆ ಶಂಕಿಸಿದೆ. ಮೂಲಗಳ ಪ್ರಕಾರ ನೌಕಾಪಡೆಯನ್ನು ಗುರಿಯಾಗಿಸಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಜನವರಿ 12ರಂದು ನರೇಂದ್ರ ಮೋದಿ ಪೋರಬಂದರ್‌ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈ ಸಂಚು ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ನೌಕಾ ಪಡೆ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸಿತ್ತು. ಈ ವೇಳೆ ಉಗ್ರರಿದ್ದ ಹಡಗು ನೌಕಾ ಪಡೆಗೆ ಕಾಣಿಸಿಕೊಂಡಿದೆ. ತಪಾಸಣೆಗಾಗಿ ಹಡಗನ್ನು ತಡೆಯುತ್ತಿದ್ದ ವೇಳೆ ತಪ್ಪಿಸಿಕೊಂಡು ಹೊರಟ ಹಡಗು ಸ್ವಲ್ಪ ದೂರದಲ್ಲೇ ಸ್ಫೋಟಗೊಂಡಿದೆ.

ಈ ಹಡಗಿನಲ್ಲಿದ್ದವರು ಪಾಕಿಸ್ತಾನದ ಕಡಲ ಏಜೆನ್ಸಿ ಮತ್ತು ಪಾಕ್ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

SCROLL FOR NEXT