ದೇಶ

ಭಾರತದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ: ಅನಿವಾಸಿ ಭಾರತೀಯರಿಗೆ ಮೋದಿ ಕರೆ

ಭಾರತದ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಇರಲಿ ಎಂದು ಪ್ರಧಾನಿ...

ಗಾಂಧಿನಗರ: ಭಾರತದ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಇರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಲಾಗಿರುವ 13ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಸಾಲ್ಟ್ ಮೌಂಟೇನ್ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲೇ ಇದ್ರೂ ಈ ದೇಶದ ಮಣ್ಣಿನ ಋಣ ತೀರಿಸಿ. ಭಾರತದ ಅಭಿವೃದ್ಧಿಯಲ್ಲಿ ನೀವು ಪಾಲ್ಗೊಳ್ಳಿ ಎಂದು ಅನಿವಾಸಿ ಭಾರತೀಯರಿಗೆ ಕರೆ ನೀಡಿದ್ದಾರೆ.

ಮಹಾತ್ಮ ಗಾಂಧಿ ಅವರು ಸ್ವರಾಜ್ಯ ಸ್ವಾವಲಂಬನೆ ಸಂದೇಶ ನೀಡಿದ್ರು. ವಿಶ್ವದ ಹಲವು ದೇಶಗಳಲ್ಲಿ ಗಾಂಧಿ ಪ್ರತಿಮೆ ಸ್ಫಾಪಿತವಾಗಿದೆ. ಇಂದು ಇಡೀ ವಿಶ್ವ ಭಾರತವನ್ನು ನೋಡುತ್ತಿದೆ. ಅವರ ಸಂದೇಶವನ್ನು ನಾವೆಲ್ಲರು ಪಾಲಿಸಬೇಕು ಎಂದಿದ್ದಾರೆ.

ಪ್ರಪಂಚದಲ್ಲಿ ಭಾರತೀಯರಿಗೆ ಹೆಚ್ಚಿನ ಮನ್ನಣೆ ಇದೆ. ಇಂದು ದೇಶದ ಸಾಮರ್ಥ್ಯ ಹೆಚ್ಚಿದೆ. ನಮ್ಮ ಬಳಿ ಜ್ಞಾನ ಮತ್ತು ಅನುಭವ ಎರಡು ಇದೆ. ಎಷ್ಟೇ ಜನ ಬಂದರೂ ಇಲ್ಲಿ ಸಾಕಷ್ಟು ಕೆಲಸವಿದೆ ಎಂದು ಅವರು ಹೇಳಿದ್ದಾರೆ.

ಇಡೀ ವಿಶ್ವವನ್ನೇ ಪರಿವಾರ ಎಂದು ಪರಿಗಣಿಸಿದವರು ನಾವು. ಗಂಗಾ ನದಿ ತಟದಲ್ಲಿ ಶುದ್ಧೀಕರಣ ಆಗಬೇಕಿದೆ. ಅನಿವಾಸಿ ಭಾರತೀಯರು ಗಂಗಾ ಶುದ್ಧೀಕರಣದಲ್ಲಿ ಪಾಲ್ಗೊಳ್ಳಿ ಎಂದ ಅವರು 100 ವರ್ಷಗಳ ಹಿಂದೆ ಗಾಂಧಿ ಸ್ವದೇಶಕ್ಕೆ ಆಗಮಿಸಿ ಸ್ವಾತಂತ್ರ್ಯ ತಂದುಕೊಟ್ಟರು. ಈ ನೆನಪಲ್ಲೇ ನೀವು ಸಹ ದೇಶ ಸೇವೆ ಮಾಡಿ ಎಂದು ಮೋದಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!