ಉಕ್ರೇನ್ ದೇಶದ ಫುಟ್ಬಾಲ್ ಆಟಗಾರ ವಿಟಾಲಿ ರೇವ ಮತ್ತು ಎಲೆನಾ 
ದೇಶ

ಭಾರತೀಯ ಶೈಲಿಯಲ್ಲಿ ಮದುವೆಯಾದ ಉಕ್ರೇನ್ ಫುಟ್ಬಾಲಿಗ ವಿಟಾಲಿ ರೇವ

ಉಕ್ರೇನ್ ದೇಶದ ಫುಟ್ಬಾಲ್ ಆಟಗಾರ...

ನೀಲಾವರ (ಉಡುಪಿ): ಉಕ್ರೇನ್ ದೇಶದ ಫುಟ್ಬಾಲ್ ಆಟಗಾರ ವಿಟಾಲಿ ರೇವ ಮತ್ತು ಎಲೆನಾ ಅವರ ಮದುವೆ ನೀಲಾವರ ಗೋಶಾಲೆಯಲ್ಲಿ ಗುರುವಾರ ನಡೆಯಿತು. ಅವರು ಈಗಾಗಲೇ ತಮ್ಮ ದೇಶದ ಪದ್ಧತಿಯಂತೆ ಮದುವೆಯಾಗಿದ್ದು, ಅವರಿಗೆ ವೆಸಿಲಿಸಾ ಎನ್ನುವ ಮುದ್ದಾದ ಮಗಳೂ ಇದ್ದಾಳೆ.

ಭಾರತೀಯ ಹಿಂದೂ ಪದ್ಧತಿಯಲ್ಲಿ ಮದುವೆಯಾಗುವ ಆಸೆಯನ್ನು ಈ ದಂಪತಿ ಗುರುವಾರ ನೆರವೇರಿಸಿಕೊಂಡರು. ವಿಟಾಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿದ್ದು, 2003ರವರೆಗೆ ಸುಮಾರು 5 ವರ್ಷಗಳ ಕಾಲ ಉಕ್ರೇನ್ ದೇಶದ ರಾಷ್ಟ್ರೀಯ ತಂಡದ ಗೋಲ್‌ಕೀಪರ್ ಆಗಿ ಆಟವಾಡಿದ್ದರು.

ಇಂದಿಗೂ ಅವರು ವಿಶ್ವದ 10 ಶ್ರೇಷ್ಠ ಗೋಲ್ ಕೀಪರ್‌ಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಾರೆ. ಪ್ರಸ್ತುತ ಫುಟ್ಬಾಲ್ ಕ್ಲಬ್‌ವೊಂದರ ಆಟಗಾರನಾಗಿದ್ದಾರೆ. ಇವರ ಪತ್ನಿ ಎಲೆನಾ ಒಳಾಂಗಣ ವಿನ್ಯಾಸಗಾರ್ತಿಯಾಗಿದ್ದಾರೆ.

ಆಕರ್ಷಣೆಗೊಂಡಿದ್ದು ಹೇಗೆ?


ಫುಟ್ಬಾಲ್‌ನಲ್ಲಿ ಏಕಾಗ್ರತೆ ಸಾಧಿಸಲು ಭಾರತೀಯ ಪದ್ಧತಿಯ ಧ್ಯಾನವನ್ನು ಆರಂಭಿಸಿದ ವಿಟಾಲಿ ಕ್ರಮೇಣ ಭಾರತೀಯ ಸಂಸ್ಕೃತಿಯತ್ತ ಆಕರ್ಷಿತರಾದರು. ಇತ್ತೀಚೆಗೆ ಉಡುಪಿಯ ಆಯುರ್ವೇದ ವೈದ್ಯ ತನ್ಮಯ ಗೋಸ್ವಾಮಿ ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಭಾರತೀಯ ಪದ್ಧತಿಯಂತೆ ಮದುವೆಯಾಗುವ ಬಹುದಿನಗಳ ಆಸೆಯನ್ನು ಹೇಳಿಕೊಂಡರು. ಅದರಲ್ಲೂ ತಮ್ಮ ತಂದೆ ಗೋವುಗಳಿರುವ ಮತ್ತು ಆಧ್ಯಾತ್ಮಿಕ ತಾಣದಲ್ಲಿ ನಡೆಯಬೇಕು ಎಂದು ಇಚ್ಛಿಸಿದ್ದರು.

ಅದರಂತೆ ತನ್ಮಯ ಗೋಸ್ವಾಮಿ ಅವರು ನೀಲಾವರ ಗೋಶಾಲೆಯಲ್ಲಿ ವ್ಯವಸ್ಥೆ ಮಾಡಿದ್ದರು. ಎಲೆನಾ ಅವರ ಹೆತ್ತವರ ಗೈರುಹಾಜರಿಯಲ್ಲಿ ಗೋಸ್ವಾಮಿ ದಂಪತಿ ವಧುವನ್ನು ವರನಿಗೆ ಧಾರೆ ಎರೆದುಕೊಟ್ಟರು. ಉಕ್ರೇನ್‌ನಿಂದ ಬಂದಿದ್ದ ವಿಟಾಲಿ-ಎಲೆನಾ ಅವರ ಸ್ನೇಹಿತರು ಈ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ