ದೇಶ

ಬ್ರಿಟನ್ ಸಂಸತ್‌ನಲ್ಲಿ ಗಾಂಧಿ ಪ್ರತಿಮೆ: ಕೆಮೆರಾನ್ ಸಮರ್ಥನೆ

Mainashree

ಲಂಡನ್: ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಸ್ಥಾಪನೆಯು ಭಾರತ-ಬ್ರಿಟನ್ ಐತಿಹಾಸಿಕ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಹೀಗೆಂದು ಹೇಳುವ ಮೂಲಕ ಬ್ರಿಟನ್ ಪ್ರಧಾನಿ ಡೇವಿಡ್ ಕೆಮೆರಾನ್ ಅವರು ಗಾಂಧಿ ಪ್ರತಿಮೆ ಸ್ಥಾಪನೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಬ್ರಿಟನ್‌ನ ಯುದ್ಧ ಸಮಯದಲ್ಲಿ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್, ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾ ಅವರ ಪ್ರತಿಮೆಗಳ ಪಕ್ಕದಲ್ಲೇ ಗಾಂಧಿ ಪ್ರತಿಮೆಯನ್ನೂ ಸ್ಥಾಪಿಸಲು ನಿರ್ಧರಿಸಲಾಗಿದೆ.

ಬ್ರಿಟನ್ ಸಂಸತ್‌ನಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸುವುದಕ್ಕೆ ಹಲವಾರು ಕಾರಣಗಳಿವೆ. ಭಾರತೀಯ ಇತಿಹಾಸದಲ್ಲಿ ಗಾಂಧಿಗಿರುವ ಪ್ರಾಮುಖ್ಯ, ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಗೆ ಸಂಬಂಧಿಸಿ ಗಾಂಧೀಜಿಯ ಬೋಧನೆಗಳು ಇವೆಲ್ಲವೂ ಅವುಗಳಲ್ಲಿ ಒಳಗೊಂಡಿವೆ ಎಂದಿದ್ದಾರೆ ಕೆಮೆರಾನ್.

SCROLL FOR NEXT