ಪೇಶಾವರ: ಉಗ್ರರ ಪೈಶಾಚಿಕ ಕೃತ್ಯದಿಂದ ಕಪ್ಪು ಚಾಹೆ ಪಸರಿಸಿದ್ದ ಪಾಕಿಸ್ತಾನದ ಆರ್ಮಿ ಪಬ್ಲಿಕ್ ಶಾಲೆ ಮಂಗಳವಾರ ಮತ್ತೆ ಪುನರಾರಂಭಗೊಂಡಿದೆ.
ಡಿ.16 ಪೇಶಾವರದ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ, 141 ಮುಗ್ಧ ಮಕ್ಕಳನ್ನು ಕೊಂದಿದ್ದರು. ಘಟನೆಯಲ್ಲಿ 124ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದಿನಿಂದ ಶಾಲೆಯನ್ನು ಮುಚ್ಚಲಾಗಿತ್ತು.
ಉಗ್ರರ ದಾಳಿಯ ನಂತರ ಹಲವು ದಿನಗಳಿಂದ ಶಾಲೆಯನ್ನು ಮುಚ್ಚಲಾಗಿತ್ತು. ಈಗ ಮತ್ತೆ ಶಾಲೆಯನ್ನು ತೆರೆಯಲಾಗಿದ್ದು, ಪೋಷಕರೇ ತಮ್ಮ ಮಕ್ಕಳನ್ನು ಕರೆತಂದು ಶಾಲೆಗೆ ಬಿಡುತ್ತಿದ್ದಾರೆ. ಶಾಲೆಯ ಪುನರಾರಂಭ ಹಿನ್ನೆಲೆ ಶಾಲೆಯ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.