ದೇಶ

ಫ್ರಾನ್ಸಲ್ಲಿ 20 ಸಾವಿರ ವೆಬ್‌ಸೈಟ್ ಹ್ಯಾಕ್

Mainashree

ಪ್ಯಾರಿಸ್: ಇಸಿಸ್ ಉಗ್ರರು ಫ್ರಾನ್ಸ್‌ನಲ್ಲಿ ಗನ್‌ನಿಂದ ಮಾತ್ರ ದಾಳಿ ನಡೆಸುತ್ತಿಲ್ಲ. ಅಂತರ್ಜಾಲಗಳ ಮೇಲೆ ಹ್ಯಾಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಮೂಲಕ ಅಲ್ಲಿನ ಸರ್ಕಾರವನ್ನು ಮತ್ತಷ್ಟುಗೊಂದಲಕ್ಕೆ ಸಿಕ್ಕಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಪೂರಕವಾಗಿ 20 ಸಾವಿರಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. 

ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಇದೊಂದು ಸಂಘಟಿತ ಕೆಲಸವಾಗಿದ್ದು, ನುರಿತ ಇಸ್ಲಾಮಿಕ್‌ರಿಂದ ನಡೆದಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವು ಧ್ಯೇಯಗಳನ್ನು ನಂಬಿಕೊಂಡಂಥ ವ್ಯಕ್ತಿಗಳಿಂದ ಇಂಥ ಕುಕೃತ್ಯ ನಡೆದಿದೆ. ಹ್ಯಾಕ್ ಮಾಡಿದ 20 ಸಾವಿರ ವೆಬ್‌ಸೈಟ್‌ಗಳಲ್ಲಿ ನಾನಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಶಾಲೆಗಳಿಂದ ಹಿಡಿದು ಪಿಜ್ಜಾ ರೆಸ್ಟೋರೆಂಟ್‌ಗಳನ್ನೂ ಹ್ಯಾಕರ್‌ಗಳು ಬಿಟ್ಟಿಲ್ಲ.

SCROLL FOR NEXT