ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂದಂತೆ ನಿಷೇಧವೇರಲಾಗಿದ್ದ ಯೂಬರ್ ಕ್ಯಾಬ್ ಸೇವೆ ಶುಕ್ರವಾರದಿಂದ ಪುನಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಯ್ಯೂಬರ್ ಕ್ಯಾಬ್ ಕಂಪನಿ ಕೆಲವು ಷರತ್ತಿಗೆ ಸಮ್ಮತಿಸಿದ ಹಿನ್ನಲೆಯಲ್ಲಿ ಇಂದಿನಿಂದ ಯ್ಯೂಬರ್ ಕ್ಯಾಬ್ ಸೇವೆ ಆರಂಭಗೊಂಡಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಚಾಲಕನ ಬಗ್ಗೆ ಪೂರ್ಣ ವಿವರ ತಿಳಿಯುವುದರ ಜತೆಗೆ, ರೆಡಿಯೋ ಟ್ಯಾಕ್ಸಿ ಪರವಾನಗಿ ಹಾಗೂ ಕ್ಯಾಬ್‌ನಲ್ಲಿ ತುರ್ತು ಪರಿಸ್ಥಿತಿ ಬಟನ್, ನೂತನ ಆ್ಯಪ್ ಅಳವಡಿಕೆ ಮಾಡುವುದಾಗಿ ಯೂಬರ್ ಕಂಪನಿ ಒಪ್ಪಿಗೆ ಸೂಚಿಸಿದೆ.
ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಕ್ಯಾಬ್ ಸಂಸ್ಥೆ ಯೂಬರ್‌ನ ಪರವಾನಗಿಯನ್ನು ದೆಹಲಿ ಸರ್ಕಾರ ರದ್ದುಗೊಳಿಸಿತ್ತು. ಯೂಬರ್ ಕಂಪನಿಯ ಚಾಲಕ ಶಿವರಕುಮಾರ್ ಯಾದವ್ ತನ್ನ ಕಾರು ಹತ್ತಿದ್ದ ಹಣಕಾಸು ಕಂಪನಿಯೊಂದರ ಎಕ್ಸಿಕ್ಯುಟಿವ್ ಮೇಲೆ ಅತ್ಯಾಚಾರವೆಸಗಿದ್ದನು. ಈ ಘಟನೆಗೂ ಮುನ್ನ ಯಾದವ್ ಯುವತಿಯೊಬ್ಬಳ ಮೇಲೆ ಅದೇ ರೀತಿ ಅತ್ಯಾಚಾರ ಮಾಡಿದ್ದ. ಇಷ್ಟಾದರೂ ಆತನ ಹಿನ್ನೆಲೆ ವಿಚಾರಿಸದೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಯೂಬರ್ ಕ್ಯಾಬ್ ಕಂಪನಿಯ ವಿರುದ್ಧ ದೆಹಲಿ ಸರ್ಕಾರ ಪರವಾನಗಿಯನ್ನು ರದ್ದುಗೊಳಿಸಿ, ಕ್ಯಾಬ್ ಸೇವೆಗೆ ನಿಷೇಧವರಿತ್ತು.