ಬರಾಕ್ ಒಬಾಮಾ, ತಾಜ್‌ಮಹಲ್‌ 
ದೇಶ

ನಾಳೆ ಭಾರತಕ್ಕೆ ಒಬಾಮಾ: ಆಗ್ರಾ ಭೇಟಿ ರದ್ದು

66ನೇ ಗಣರಾಜ್ಯೋತ್ಸವದ ಪ್ರಮುಖ ಅತಿಥಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಾಳೆ ಭಾರತಕ್ಕೆ ಆಗಮಿಸುತ್ತಿದ್ದು, ಮೂರು ದಿನಗಳ ಭಾರತ ಪ್ರವಾಸದಲ್ಲಿನ ಆಗ್ರಾ ಭೇಟಿ ರದ್ದಾಗಿದೆ ಎಂದು ಉತ್ತರಪ್ರದೇಶ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: 66ನೇ ಗಣರಾಜ್ಯೋತ್ಸವದ ಪ್ರಮುಖ ಅತಿಥಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಾಳೆ ಭಾರತಕ್ಕೆ ಆಗಮಿಸುತ್ತಿದ್ದು, ಮೂರು ದಿನಗಳ ಭಾರತ ಪ್ರವಾಸದಲ್ಲಿನ ಆಗ್ರಾ ಭೇಟಿ ರದ್ದಾಗಿದೆ ಎಂದು ಉತ್ತರಪ್ರದೇಶ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿ ಅರೇಬಿಯಾ ರಾಜ ಅಬ್ದುಲ್ಲಾ ಅವರ ನಿಧನ ಹಿನ್ನೆಲೆಯಲ್ಲಿ ಮಂಗಳವಾರ ಆಗ್ರಾದ ವಿಶ್ವವಿಖ್ಯಾತ ತಾಜ್‌ಮಹಲ್ ಭೇಟಿಯನ್ನು ರದ್ದು ಪಡಿಸಿದ್ದು, ಒಬಾಮಾ ನೇರವಾಗಿ ಸೌದಿ ಅರೇಬಿಯಾಗೆ ತೆರಳಲಿದ್ದಾರೆ.

ಒಬಾಮಾ ಆಗ್ರಾ ಭೇಟಿ ರದ್ದಾಗಿದ್ದು, ಯುಎಸ್ ತಂಡ ಈ ಮಾಹಿತಿಯನ್ನು ದೃಢಪಡಿಸಿವೆ ಎಂದು ಆಗ್ರಾದ ಜಿಲ್ಲಾಧಿಕಾರಿ ಪ್ರದೀಪ್ ಬಾಟ್ನಾಗರ್ ಅವರು ತಿಳಿಸಿದ್ದಾರೆ. ಅಲ್ಲದೆ ಒಬಾಮಾ ಆಗ್ರ ಭೇಟಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಭದ್ರತೆಯಲ್ಲಿ ತೊಡಗಿದ್ದ ಅಮೆರಿಕ ಭದ್ರತಾ ತಂಡ ಆಗ್ರವನ್ನು ತೊರೆದಿದ್ದಾರೆ ಎಂದು ಆಗ್ರಾದ ಪ್ರಧಾನ ಕಾರ್ಯದರ್ಶಿ ನವ್ನಿತ್ ಸಿಂಘಾಲ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಒಬಾಮಾ ಅವರು ಶನಿವಾರ ಸಂಜೆ ಅಮೆರಿಕ ಆ್ಯಂಡ್ರೊರ್ಸ್ ಏರ್‌ಫೋರ್ಸ್ ಬೆಸ್‌ನಿಂದ ಹಾರಲಿದ್ದು, ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಭಾರತದ ನೆಲವನ್ನು ಸ್ಪರ್ಶಿಸಲಿದ್ದಾರೆ.

ಒಬಾಮಾ ಭಾರತ ಪ್ರವಾಸದ ದಿನಚರಿ

ಜ.25- ಭಾನುವಾರ ನವದೆಹಲಿ ವಿಮಾನ ನಿಲ್ದಾಣಕ್ಕೆ ಒಬಾಮಾ ಆಗಮನ. ನಂತರ ರಾಷ್ಟ್ರಪತಿ ಭವನದಿಂದ ರಾಜ್ ಘಾಟ್‌ಗೆ ಭೇಟಿ. ರಾಷ್ಟ್ರಪಿತ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ. ದೇಶದ ಗಡಿ ವಿಚಾರ, ಆರ್ಥಿಕತೆ, ಹವಾಮಾನ ಬದಲಾವಣೆ, ಬಂಡವಾಳ, ರಕ್ಷಣೆ ಮತ್ತು ಭದ್ರತಾ ಸಹಕಾರ ಸೇರಿದಂತೆ ಪ್ರಾದೇಶಿಕ ಜಾಗತಿಕ ಸಮಸ್ಯೆಗಳ ಕುರಿತಾಗಿ ಹೈದರಾಬಾದ್‌ ಹೌಸ್ ನಲ್ಲಿ ಸಭೆ. ನಂತರ ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಭೋಜನ ಕೂಟ.

ಜ.26-ಸೋಮವಾರ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೊಂದಿಗೆ ಪರೇಡ್ ಮೈದಾನಕ್ಕೆ ಭೇಟಿ. ನಂತರ ಭಾರತ ಹಾಗೂ ಅಮೆರಿಕ ದೇಶದ ಎಲ್ಲಾ ವ್ಯವಹಾರಿಕ ನಾಯಕರೊಂದಿಗೆ ಚರ್ಚೆ.

ಜ.27- ಮಂಗಳವಾರ ಒಬಾಮಾ ಪ್ರವಾಸದ ಕೊನೆಯ ದಿನ ಭಾರತ ಮತ್ತು ಅಮೆರಿಕ ಭವಿಷ್ಯದ ಅಭಿವೃದ್ಧಿ ಕುರಿತಾಗಿ ಸಾರ್ವಜನಿಕ ಭಾಷಣ. ನಂತರ ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡುತ್ತಾರೆ ಎನ್ನಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT