ನವದೆಹಲಿ: ಕೇಜ್ರಿವಾಲ್‌ಗೆ ಗಣರಾಜ್ಯೋತ್ಸವದ ಆಮಂತ್ರಣ ಬೇಕಿದ್ದರೆ ಬಿಜೆಪಿಗೆ ಸೇರ್ಪಡೆಯಾಗಲಿ ಎಂದು ಕಿರಣ್ ಬೇಡಿ ಹೇಳಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಪರೇಡ್‌ನಲ್ಲಿ ಭಾಗವಹಿಸಲು ನನಗೆ ಆಹ್ವಾನ ನೀಡಿಲ್ಲ ಎಂಬ ಕೇಜ್ರಿವಾಲ್ ಅವರ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ಬೇಡಿ, ಆಮಂತ್ರಣ ಎನ್ನುವುದು ಕೇಳಿ ಪಡೆಯುವಂತದಲ್ಲ, ಅದು ತಾನಾಗೇ ಬರಬೇಕು. ನನಗೆ ಆಮಂತ್ರಣ ಯಾಕೆ ದೊರಕಿತು, ನನಗೆ ಏಕೆ ಮುಂದಿನ ಸಾಲಿನಲ್ಲೇ ಕುರ್ಚಿ ಸಿಕ್ಕಿತು ಎಂಬುದನ್ನು ಕೇಜ್ರಿವಾಲ್ ಆಲೋಚಿಸಬೇಕು. ಕೇಜ್ರಿವಾಲ್ ಅವರು ಇನ್ನು ಬೆಳವಣಿಗೆ ಹೊಂದಬೇಕಿದೆ ಎಂದು ಹೇಳಿದ್ದಾರೆ.
ನನ್ನನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿಸಿಲ್ಲ. ಯಾವ ಕಾರಣಕ್ಕೆ ಆಮಂತ್ರಣ ದೊರೆತಿಲ್ಲ ಎಂಬುದು ನನಗೆ ತಿಳಿದಿಲ್ಲ. ಆದರೂ ನಾನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದರು.