ದೇಶ

ಎಸ್. ಜೈಶಂಕರ್ ಹೊಸ ವಿದೇಶಾಂಗ ಕಾರ್ಯದರ್ಶಿ

Srinivasamurthy VN

ನವದೆಹಲಿ: ಗಣರಾಜ್ಯೋತ್ಸವ ದಿನಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕು ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಎಸ್. ಜೈಶಂಕರ್‍ಗೆ ಭರ್ಜರಿ ಉಡುಗೊರೆ ನೀಡಲಾಗಿದೆ. ಅವರನ್ನೀಗ ವಿದೇಶಾಂಗ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಹಾಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅಧಿಕಾರದ ಅವಧಿ ಮೊಟಕುಗೊಳಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ತಡರಾತ್ರಿ ನಡೆದ ಸಂಪುಟ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್‍ನಲ್ಲಿ ಸಿಂಗ್ ಅವರ ಎರಡು ವರ್ಷದ ಅಧಿಕಾರಾವಧಿ ಮುಗಿಯಬೇಕಿತ್ತು.

ಬಾಂಧವ್ಯ ಬೆಸುಗೆ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅಮೆರಿಕ-ಭಾರತದ ನಡುವಿನ ಬಾಂಧವ್ಯದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಇದಕ್ಕೆ ಮೂಲ ಕಾರಣಕತೃ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೈಶಂಕರ್. ಹಾಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರನ್ನು ಯುಪಿಎ ನೇತೃತ್ವದ ಸರ್ಕಾರ ನೇಮಕ ಮಾಡಿತ್ತು. ಅವರ ಕಾರ್ಯವೈಖರಿ ಬಗ್ಗೆ ಸ್ವತಃ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ಗೂ ಅಸಮಾಧಾನವಿತ್ತು.

ಭಾರತದ ಯೋಜನೆಗಳ ಬಗ್ಗೆ ನೆರೆ ರಾಷ್ಟ್ರಗಳ ಜತೆ ನಿಕಟ ಸಂಪರ್ಕ ಮಾಡಿ ಮಾಹಿತಿ ನೀಡುತ್ತಿರಲಿಲ್ಲ ಎಂಬ ಆರೋಪ ಎದುರಿಸುತ್ತಿದ್ದರು. ಜೈಶಂಕರ್ ಅವರು ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನುಭವದ ಜತೆಗೆ ಪ್ರಧಾನಿ ಮೋದಿ ಅವರ ದೃಷ್ಟಿಕೋನದಲ್ಲಿ ಕಾರ್ಯನಿರ್ವಹಿಸುವ ದಕ್ಷತೆಯನ್ನು ಹೊಂದಿದ್ದಾರೆ ಎನ್ನುವುದೂ ಈ ನೇಮಕ ಪ್ರಕ್ರಿಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಜೈಶಂಕರ್ ಹಾಲಿ ಅಧಿಕಾರದ ಅವ„ ಜೂ. 31ಕ್ಕೆ ಕೊನೆಗೊಳ್ಳಬೇಕಿತ್ತು. ಗುರುವಾರವೇ ಅವರು ಅಧಿಕಾರ ವಹಿಸಲಿದ್ದಾರೆ.

SCROLL FOR NEXT