ದೇಶ

ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ವಿನಯ್ (33) ಎಂಬಾತನನ್ನು ಬಂಧಿಸಿ ರು6.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಶಾಂತಿನಗರ ನಿವಾಸಿಯಾಗಿರುವ ವಿನಯ್  ಕಲಾಸಿಪಾಳ್ಯ ಹೊಸ ಬಡಾವಣೆ ಎ.ಎಂ.ರಸ್ತೆಯಲ್ಲಿರುವ ಮನು ಟೈರ್ಸ್ ಅಂಗಡಿಯಲ್ಲಿ ಜ.28ರಂದು ಸಿಡ್ನಿ ಸಿಕ್ಸರ್ಸ್ ಮತ್ತು ಪರ್ತ್ ಸ್ಕಾಚರ್ಸ್ ತಂಡಗಳ ನಡುವಿನ ಬಿಗ್ ಬಾಷ್ ಟೂರ್ನಮೆಂಟ್‍ನ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿ ರು6.5 ಲಕ್ಷ ನಗದು ಜತೆಗೆ ಒಂದು ಲ್ಯಾಪ್ ಟಾಪ್, ಎರಡು ಮೊಬೈಲ್ ಫೋನ್ ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದೆ.

ಆರೋಪಿ  ವಿರುದ್ಧ  ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಬೆಟ್ಟಿಂಗ್ ಡಾಟ್ ಕಾಂ ವೆಬ್‍ಸೈಟ್ ಮೂಲಕ ಬೆಂಗಳೂರು ಹಾಗೂ ಮುಂಬೈ ಪಂಟರ್ಸ್‍ಗಳಿಂದ ಆರೋಪಿ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ. ತಾನು ಕಟ್ಟಿಸಿಕೊಂಡ ಬೆಟ್ಟಿಂಗ್ ಹಣವನ್ನು ತನಗಿಂತಲೂ ದೊಡ್ಡ ಬುಕ್ಕಿಯಾದ ರಾಜಸ್ಥಾನದ ಕಾಕು ಎಂಬುವನ ಬಳಿ ಕಟ್ಟುತ್ತಿದ್ದನು. ಅದಕ್ಕೆ ಕಾಕುವಿನಿಂದ ಶೇ.15ರಷ್ಟು ಕಮಿಷನ್ ಪಡೆಯುತ್ತಿದ್ದಾಗಿ ವಿನಯ್ ವಿಚಾರಣೆ ವೇಳೆ ತಿಳಿಸಿದ್ದಾನೆ.

ಮತ್ತೊಂದು ದಾಳಿ: ಬಾಣಸವಾಡಿ ರಾಮಸ್ವಾಮಿಪಾಳ್ಯ
ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಆನಂದ(37) ಎಂಬ ಬುಕ್ಕಿಯನ್ನು ಬಂಧಿಸಿ ರು 67 ಸಾವಿರ ನಗದು, 1 ಮೊಬೈಲ್  ಫೋನ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT