ದೇಶ

ನ್ಯಾಯಾಧೀಶರ ವಿರುದ್ಧ ಹೇಳಿಕೆ: ಸಿಪಿಎಂ ಮುಖಂಡನಿಗೆ ಜೈಲು ಶಿಕ್ಷೆ

Srinivasamurthy VN

ಕೊಚ್ಚಿ: ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ರಾಜ್ಯದ ಸಿಪಿಎಂ ಮುಖಂಡ ಪಿವಿ ಜಯರಾಜನ್ ಅವರಿಗೆ ನ್ಯಾಯಾಲಯ 4 ವಾರಗಳ ಜೈಲು ಶಿಕ್ಷೆ ವಿಧಿಸಿದೆ.

2010ರ ಜೂನ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಸಿಪಿಎಂ ಮುಖಂಡ ಪಿವಿ ಜಯರಾಜನ್ ಅವರು ಹೈಕೋರ್ಟ್ ನ್ಯಾಯಾಧೀಶರೋರ್ವರನ್ನು ಅವಿವೇಕಿ ಎಂದು ಜರಿದಿದ್ದರು. ಜಯರಾಜನ್ ಅವರ ಸಾರ್ವಜನಿಕ ಸಭೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದರಿಂದ ಕುಪಿತರಾಗಿದ್ದ ಜಯರಾಜನ್ ಈ ರೀತಿ ಸಾರ್ವಜನಿಕ ಹೇಳಿಕೆ ನೀಡಿದ್ದರು.

ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ದೂರು ಕೂಡ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 2011 ನವೆಂಬರ್ ತಿಂಗಳನಲ್ಲಿ ಜಯರಾಜನ್‌ಗೆ 6 ತಿಂಗಳ ಸೆರವಾಸ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಜಯರಾಜನ್ ಅವರು, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಸತತ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಮಾತ್ರ ಕಡಿತಗೊಳಿಸಿದ್ದು, 4 ತಿಂಗಳ ಸೆರೆವಾಸ ಶಿಕ್ಷೆ ನೀಡಿದೆ. ಅಲ್ಲದೆ 2 ಸಾವಿರ ರು.ಗಳ ದಂಡ ಕೂಡ ಹಾಕಿದೆ.

SCROLL FOR NEXT