ದೇಶ

ಹೆಚ್1ಎನ್1ಗೆ ಮತ್ತೊಂದು ಬಲಿ

ಹೆಚ್1ಎನ್1 ಮಾರಕ ರೋಗದ ಸೋಂಕು ತಗುಲಿ 1 ವರ್ಷದ ಹೆಣ್ಣುಮಗು ಬಲಿಯಾಗಿ...

ಇಂದೋರ್: ಹೆಚ್1ಎನ್1 ಮಾರಕ ರೋಗದ ಸೋಂಕು ತಗುಲಿ 1 ವರ್ಷದ ಹೆಣ್ಣುಮಗು ಬಲಿಯಾಗಿರುವುದಾಗಿ ಶುಕ್ರವಾರ ವರದಿಯಾಗಿದೆ.

ಹಂದಿ ಜ್ವರದ ಸೋಂಕು ತಗುಲಿ ಹಲವು ದಿನಗಳಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ 1 ವರ್ಷದ ಹೆಣ್ಣು ಮಗು, ಮೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಮಗುವಿನ ಸ್ಥಿತಿ ತೀರಾ ಗಂಭೀರವಾದಾಗ ಇಂಡೆಕ್ಸ್ ವೈದ್ಯಕೀಯ ಆಸ್ಪತ್ರೆಗೆ ತೆರಳುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಮಗುವಿನ ಪೋಷಕರು ಇಂಡೆಕ್ಸ್ ವೈದ್ಯಾಕೀಯ ಆಸ್ಪತ್ರೆಗೆ ದಾಖಲು ಮಾಡಲು ಹೋಗುವಷ್ಟರಲ್ಲಿ ತೀವ್ರ ಬಳಲಿಕೆಯಿಂದ ಸಾವನಪ್ಪಿದೆ  ಎಂದು ಹೇಳಲಾಗುತ್ತಿದೆ.

ಮಗು ಸಾವನಪ್ಪಿರುವುದು ಹಂದಿಜ್ವರದಿಂದಲೇ ಎಂದು ಆಸ್ಪತ್ರೆಯ ವೈದ್ಯರು ಈ ವರೆಗೂ ಧೃಢೀಕರಿಸಿಲ್ಲ. ಆದರೆ ಪೋಷಕರು ಮಗು ಸಾವನಪ್ಪಿರುವುದು ಹಂದಿ ಜ್ವರದಿಂದಲೇ ಎಂದು ಹೇಳಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಎಂಜಿಎಂ ಕಾಲೇಜಿನ ಮುಖ್ಯಾಧಿಕಾರಿ ಡಾ.ಸಂಜಯ್ ದೀಕ್ಷಿತ್, ದಾಖಲಾತಿಗಾಗಿ ಆಸ್ಪತ್ರೆಗೆ ಬಂದಾಗಲೇ ಮಗು ಸಾವನಪ್ಪಿತ್ತು. ಆದ ಕಾರಣ ಸ್ಯಾಂಪಲ್‌ಗಾಗಿ ಮಗುವಿನ ರಕ್ತ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯಕೀಯ ತಪಾಸಣೆ ವೇಳೆ ಮಗು ಸಾವನಪ್ಪಿರುವುದು ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel