ಬೆಂಗಳೂರು:ಮಾದಕ ವಸ್ತು `ಮೆಥಂಪೆಟಾಮೈನ್' ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿ 2.15 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಮುಂಬೈನ ಗುಜರಿಯಾ ಸ್ಟ್ರೀಟ್ ನಿವಾಸಿ ನದಿಮಾ ಸಲೀಂ(26), ಬೆಂಗಳೂರಿನ ನೀಲಸಂದ್ರ ಬಜಾಜ್ ಸ್ಟ್ರೀಟ್ನ ಮಹ್ಮದ್ ಆರೀ_ï(26) ಹಾಗೂ ಸೈಯ್ಯದ್ ಇನಾಯತ್ (26) ಬಂಧಿತರು. ಜ.28ರ ರಾತ್ರಿ 9ರ ಸುಮಾರಿಗೆ ಕೋರಮಂಗಲ 2ನೇ ಬ್ಲಾಕ್ ನೂರ್ ಮಸೀದಿ ಬಳಿ ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಶದಿಂದ 85 ಗ್ರಾಂ ಮೆಥಂಪೆಟಾಮೈನ್, 2 ಮೊಬೈಲ್ ಫೋನ್ ಹಾಗೂ 1 ಎಲೆಕ್ಟ್ರಾನಿಕ್ ಸ್ಕೇಲ್ ವಶಪಡಿಸಿಕೊಳ್ಳಲಾಗಿದೆ.
ಇದನ್ನು ಮುಂಬೈನಿಂದ ಬೆಂಗಳೂರಿಗೆ ತಂದು ಕಾಲೇಜು ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳಿಗೆ 1 ಗ್ರಾಂಗೆ ರು2500ಕ್ಕೆ ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ
ತಿಳಿದುಬಂದಿದೆ.