ಕಿರಣ್‌ ಬೇಡಿ, ಕುಮಾರ್‌ ವಿಶ್ವಾಸ್‌ 
ದೇಶ

ಅಶ್ಲೀಲ ಕಾಮೆಂಟ್: ಕುಮಾರ್ ವಿಶ್ವಾಸ್ ವಿರುದ್ಧ ಕಿರಣ್ ಬೇಡಿ ದೂರು

ಆಮ್‌ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಕುಮಾರ್‌ ವಿಶ್ವಾಸ್‌ ತನ್ನ ವಿರುದ್ಧ ಅಶ್ಲೀಲ ಟೀಕೆಯನ್ನು ಮಾಡಿದ್ದಾರೆ ಎಂದು ಆರೋಪಿಸಿ ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್‌ ಬೇಡಿ...

ನವದೆಹಲಿ: ಆಮ್‌ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಕುಮಾರ್‌ ವಿಶ್ವಾಸ್‌ ತನ್ನ ವಿರುದ್ಧ ಅಶ್ಲೀಲ ಟೀಕೆಯನ್ನು ಮಾಡಿದ್ದಾರೆ ಎಂದು ಆರೋಪಿಸಿ ದೆಹಲಿ ಬಿಜೆಪಿ
ಸಿಎಂ ಅಭ್ಯರ್ಥಿ ಕಿರಣ್‌ ಬೇಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಕುಮಾರ್ ವಿಶ್ವಾಸ್ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಸಮ್ಮುಖದಲ್ಲೇ ತನ್ನ ವಿರುದ್ಧ ಅವಮಾನಕರ ಟೀಕೆ ಮಾಡಿದ್ದಾರೆ ಎಂದು ಕಿರಣ್ ಬೇಡಿ ಆರೋಪಿಸಿದ್ದಾರೆ.

ಇದೇ ವೇಳೆ ಬಿಜೆಪಿ ಕೂಡ ಕುಮಾರ್‌ ವಿಶ್ವಾಸ್‌ ವಿರುದ್ಧ ಇದೇ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ತನಿಖೆ ಹಾಗೂ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ನಾನು ಅಶ್ಲೀಲ ಕಾಮೆಂಟ್ ಮಾಡಿಲ್ಲ ಕುಮಾರ್ ವಿಶ್ವಾಸ್

ಕುಮಾರ್‌ ವಿಶ್ವಾಸ್‌ ತಾನು ಯಾವುದೇ ರೀತಿಯ ಕಾಮ ಪ್ರಚೋದಕ ಟೀಕೆಗಳನ್ನು ಮಾಡಿಲ್ಲ. ಒಂದೊಮ್ಮೆ ಅಂಥದ್ದನ್ನು ಕಿರಣ್‌ ಬೇಡಿ ಸಾಬೀತು ಪಡಿಸಿದರೆ ತಾನು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.

ಕಿರಣ್‌ ಬೇಡಿ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಅವರನ್ನು ದೀದಿ ಎಂದೇ ಕರೆಯುತ್ತಿದ್ದೆ. ಈಗಿರುವಾಗ ನಾನು ಅವರ ಬಗ್ಗೆ ಕೀಳಾಗಿ ಕಾಮ ಪ್ರಚೋದಕ ಟೀಕೆ ಮಾಡಲು ಹೇಗೆ ಸಾಧ್ಯ ಎಂದು ವಿಶ್ವಾಸ್‌ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

SCROLL FOR NEXT