ದೇಶ

'ಶಾರದಾ' ತನಿಖೆಯಲ್ಲಿ ಟಿಎಂಸಿಗೆ ಅನ್ಯಾಯ: ಮಮತಾ ಆರೋಪ

ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದ ತನಿಖೆಯಲ್ಲಿ ಬಿಜೆಪಿ ಅನ್ಯಾಯ ಮಾಡುತ್ತಿದ್ದು, ಟಿಎಂಸಿ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.

ಇಂದು ಕೋಲ್ಕತಾದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಮತಾ ಬ್ಯಾನರ್ಜಿ ಬಹುಕೋಟಿ ಹಗರಣ ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಕುರಿತಂತೆ ಮಾತನಾಡಿದ್ದು, ಪ್ರಕರಣದ ತನಿಖೆಯಲ್ಲಿ ಬಿಜೆಪಿ ಆಟವಾಡುತ್ತಿದೆ. ತನಿಖೆಯಲ್ಲಿ ಟಿಎಂಸಿಗೆ ಅನ್ಯಾಯವಾಗುವಂತೆ ಮಾಡಿ ಟಿಎಂಸಿ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಅಲ್ಲದೆ, ಸಿಬಿಐ ತನಿಖೆಯಲ್ಲಿ ಬಿಜೆಪಿ ಮಧ್ಯೆ ಪ್ರವೇಶಿಸುತ್ತಿದ್ದು, ಟಿಎಂಸಿ ಪಕ್ಷದ ನಾಯಕರಾದ ಮದನ್ ಮಿತ್ರಾ, ಸುಭೆಂದು ಹಾಗೂ ಮುಕುಲ್ ರಾಯ್ ಅವರ ಮೇಲೆ ಒತ್ತಡವೇರುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ಎಷ್ಟು ಒತ್ತಡವೇರಲಾಗುತ್ತದೆಯೋ ಹೇರಲಿ, ಹಗರಣದ ತನಿಖೆಯಿಂದ ಪಕ್ಷ ಭಯಪಡುವುದಿಲ್ಲ. ಬಿಜೆಪಿ ವಿರುದ್ಧದ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ಒಂದು ವೇಳೆ ನನ್ನನ್ನು ಜೈಲಿಗೆ ಕಳುಹಿಸಿದರು ಕೂಡ ನನಗೆ ಭಯವಾಗುವುದಿಲ್ಲ. ಪ್ರಕರಣದಲ್ಲಿ ಪಕ್ಷದ ಯಾವುದೇ ನಾಯಕ ಜೈಲಿಗೆ ಹೋದರೂ ಪಕ್ಷ ಅವರ ಹಿಂದೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

SCROLL FOR NEXT