ಲಿಯಾಧಿಪತಿ ರಾಜ ಕುಮಾರ ಅಲ್ವಲೀದ್ ಬಿನ್ ತಲಾಲ್ 
ದೇಶ

ರು.2 ಲಕ್ಷ ಕೋಟಿ ಸಂಪತ್ತು ದಾನಕ್ಕೆ ಕೊಟ್ಟ ಸೌದಿ ದೊರೆ

ನಿಮ್ಮ ಹತ್ತಿರ ರು.2 ಲಕ್ಷ ಕೋಟಿ ಇದ್ದರೆ ಏನು ಮಾಡುತ್ತೀರಿ? ದೊಡ್ಡ ಉದ್ಯಮ ಸಮೂಹ ಸ್ಥಾಪನೆ, ಐಷಾರಾಮಿ ಮನೆ, ಬಂಗಲೆ ಕಾರು... ಹೀಗೆ ಅವರವರ ಆಶೆಗೆ ತಕ್ಕಂತೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಸೌದಿ ಅರೇಬಿಯಾದ...

ರಿಯಾದ್: ನಿಮ್ಮ ಹತ್ತಿರ ರು.2 ಲಕ್ಷ ಕೋಟಿ ಇದ್ದರೆ ಏನು ಮಾಡುತ್ತೀರಿ? ದೊಡ್ಡ ಉದ್ಯಮ ಸಮೂಹ ಸ್ಥಾಪನೆ, ಐಷಾರಾಮಿ ಮನೆ, ಬಂಗಲೆ ಕಾರು... ಹೀಗೆ ಅವರವರ ಆಶೆಗೆ ತಕ್ಕಂತೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಸೌದಿ ಅರೇಬಿಯಾದ ಮಿಲಿಯಾಧಿಪತಿ ರಾಜ ಕುಮಾರ ಅಲ್ವಲೀದ್ ಬಿನ್ ತಲಾಲ್ ಮಾತ್ರ ರು.2 ಲಕ್ಷ ಕೋಟಿ ಮೊತ್ತವನ್ನು ದಾನ- ಧರ್ಮಕ್ಕಾಗಿ ವಿನಿಯೋಗಿಸಲು ಮುಂದಾಗಿದ್ದಾರೆ.

ಅಂದ ಹಾಗೆ ಇಂಥ ಬೆಳವಣಿಗೆಗೆ ಕಾರಣವಾಗಿದ್ದು ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ ಅವರೇ ಕಾರಣವಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.
ಮಹಿಳಾ ಸಬಲೀಕರಣ, ಯುವಕರ ಅಭ್ಯುದಯ, ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ಈ ಮೊತ್ತವನ್ನು ವಿನಿಯೋಗಿಸಲು ಮುಂದಾಗಿದ್ದೇನೆ. ಈ ಮೂಲಕ ಸಹ್ಯ ಮತ್ತು ಎಲ್ಲರಿಗೂ ಸಹ್ಯವಾಗುವ ವಿಶ್ವವನ್ನು ಸೃಷ್ಟಿಸಬಹುದು ಎಂದು ತಲಾಲ್ ಹೇಳಿಕೊಂಡಿದ್ದಾರೆ.

ಮೊತ್ತವನ್ನು ಸಮರ್ಪಕವಾಗಿ ವಿನಿಯೋಗಿಸಲು ಮುಂದಿನ ವರ್ಷಗಳಲ್ಲಿ ಸೂಕ್ತ ಯೋಜನೆ ರೂಪಿಸಿರುವುದಾಗಿ ತಲಾಲ್ ಹೇಳಿಕೊಂಡಿದ್ದಾರೆ. ಅದಕ್ಕಾಗಿ ರಚಿಸಲಾಗಿರುವ ಸಲಹಾ ಮಂಡಳಿಯ ನೇತೃತ್ವವನ್ನು ಅವರೇ ವಹಿಸಿಕೊಳ್ಳಲಿದ್ದಾರೆ ಎಂದು ಅಲ್ವಲೀದ್ ಬಿನ್ ತಲಾಲ್ ಹೇಳಿಕೊಂಡಿದ್ದಾರೆ. ಅಂದ ಹಾಗೆ ತಲಾಲ್ ಜ.10 ರಂದು ನಿಧನ ಹೊಂದಿದ ಸೌದಿ ದೊರೆ ಅಬ್ದುಲ್ಲಾರ ಸಂಬಂಧಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ