ಕೋಣ, ಕೋಳಿ ಹಿಡಿದ ಪೊಲೀಸರಿಗೆ ದೆವ್ವದ ಹಿಂದೆ ಓಡುವ ಕಾಯಕ
ನಾಯಿ, ಕೋಳಿ, ಕಳ್ಳರು ಹಾಗೂ ಸಚಿವ ಅಜಂ ಖಾನ್ ಕೋಣಗಳನ್ನು ಹಿಡಿದು ಸುಸ್ತಾಗಿರುವ ಪೊಲೀಸರಿಗೆ ಉತ್ತರ ಪ್ರದೇಶ ಸರ್ಕಾರ ಈಗ ದೆವ್ವಗಳನ್ನು ಹಿಡಿಯೋ ಕೆಲಸ...
ಅಲಹಾಬಾದ್: ನಾಯಿ, ಕೋಳಿ, ಕಳ್ಳರು ಹಾಗೂ ಸಚಿವ ಅಜಂ ಖಾನ್ ಕೋಣಗಳನ್ನು ಹಿಡಿದು ಸುಸ್ತಾಗಿರುವ ಪೊಲೀಸರಿಗೆ ಉತ್ತರ ಪ್ರದೇಶ ಸರ್ಕಾರ ಈಗ ದೆವ್ವಗಳನ್ನು ಹಿಡಿಯೋ ಕೆಲಸ ಕೊಟ್ಟಿದೆ.
ಅಲಹಾಬಾದ್ ನಗರದಲ್ಲಿರುವ ನಿವಾಸಿಗಳಿಗೆ ದೆವ್ವ ಪ್ರತಿ ನಿತ್ಯ ಕಿರುಕುಳ ನೀಡುತ್ತಿದೆಯಂತೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ದೆವ್ವಗಳನ್ನು ಹಿಡಿಯಲು ಪೊಲೀಸರನ್ನು ನಿಯೋಜಿಸಿದೆ.
ಅಲಹಾಬಾದ್ ನ ನಿರಂಕರಿ ರೈಲ್ವೆ ನಿಲ್ದಾಣದ ಬಳಿ ಇರುವ ದೆವ್ವವೊಂದು ಪ್ರತಿ ದಿನ ಇಲ್ಲಿ ಓಡಾಡುವ ನಾಗರಿಕರಿಗೆ ತೊಂದರೆ ಕೊಡುತ್ತಿದೆಯಂತೆ. ಈ ರೀತಿಯ ಗಾಳಿಸುದ್ದಿಗಳು ಸಾಮಾಜಿಕ ಮಾಧ್ಯಮ ಹಾಗೂ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ.
ಹೆಣ್ಣು ದೆವ್ವವೊಂದು ಅಲ್ಲಿನ ಜನರನ್ನು ಹಿಂಬಾಲಿಸುತ್ತಿದೆಯಂತೆ. ಹೀಗಾಗಿ ಅಲ್ಲಿನ ಜನ ದೆವ್ವಕ್ಕೆ ಹೆದರಿ ತಾವು ಸಂಚರಿಸುವ ಮಾರ್ಗವನ್ನೆ ಬದಲಾಯಿಸುತ್ತಿದ್ದಾರಂತೆ.
ಹೀಗಾಗಿ ಜಿಲ್ಲಾ ಎಸ್ಎಸ್ ಪಿ ಕೀದ್ ಗಂಜ್, ಇದರ ಹಿಂದೆ ಕಳ್ಳ ಕಾಕರ ಕೈವಾಡವಿದೆಯಂದು ಶಂಕಿಸಿದ್ದಾರೆ. ಪೊಲೀಸರು ಪ್ರತಿ ದಿನ ಗಸ್ತು ತಿರುಗಿ ದೆವ್ವದ ಸಂಚಾರದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.