ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಎನ್ ಡಿಎ ಸರ್ಕಾರ, ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಹುದ್ದೀನ್ ನ ಪುತ್ರನಿಗೆ ವೈದ್ಯಕೀಯ ಕೋರ್ಸ್ ಓದಲು ಸಹಾಯ ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ಒಂದು ಕಡೆ ನಮ್ಮ ಅನೇಕ ಸೈನಿಕರು ಸಲಹುದ್ದೀನ್ ನಂತಹ ಅಪಾಯಕಾರಿ ಭಯೋತ್ಪಾದಕರ ಕೈಯಲ್ಲಿ ಸಾವನ್ನಪ್ಪಿದ್ದಾರೆ ಇನ್ನೊಂದೆಡೆ ಅದೇ ಭಯೋತ್ಪಾದಕನ ಪುತ್ರನಿಗೆ ಓದಲು ಎನ್ ಡಿಎ ಸರ್ಕಾರ ಸಹಾಯ ಮಾಡಿದೆ. ಇದರ ಅರ್ಥವೇನು? ಸಲಹುದ್ದೀನ್ ನ ಮಗನಿಗೆ ವೈದ್ಯಕೀಯ ಕೋರ್ಸ್ ಓದಲು ಸಹಾಯ ಮಾಡಿದ್ದೇಕೆ ಮತ್ತು ಅಂತಹ ಪ್ರಮುಖ ಉಗ್ರಗಾಮಿ ಜೊತೆ ರಾಜಿ ಮಾಡಿಕೊಂಡದ್ದೇಕೆ ಎಂಬುದನ್ನು ಬಿಜೆಪಿ ನಮಗೆ ತಿಳಿಸಬೇಕು ಎಂದು ಕಾಂಗ್ರೆಸ್ ನಾಯಕ ಅಜೊಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.