ಶ್ರೀನಗರ: ಅಮರನಾಥ ಯಾತ್ರೆಗೆ ಈಗ ಉಗ್ರರ ಭೀತಿ ಎದುರಾಗಿದ್ದು, ದಾಳಿ ಮಾಡಬಹುದಾದ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ 11 ಉಗ್ರರ ಫೋಟೋವೊಂದು ಈಗ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.
11 ಉಗ್ರರ ತಂಡವೊಂದು ಯಾತ್ರಿಕರ ಮೇಲೆ ದಾಳಿ ಮಾಡುವ ಭೀತಿ ಹಿನ್ನೆಲೆಯಲ್ಲಿ ಬುಧವಾರದಿಂದ ಆರಂಭವಾಗಿರುವ ಅಮರನಾಥ ಯಾತ್ರೆಗೆ ಬಿಗಿ ಭದ್ರತೆ ನೀಡಲಾಗಿದೆ.
ಈ ಮಧ್ಯೆ 11 ಯುವ ಉಗ್ರರ ಫೋಟೋವೊಂದು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದೆ. ಸೇನಾ ಉಡುಪಿನಲ್ಲಿರುವ ಈ ಉಗ್ರರು ಈಚೆಗಷ್ಟೇ ಹಿಜ್ಬುಲ್ ಮುಜಾಹಿದೀನ್ ಉಗ್ರ ಗುಂಪಿಗೆ ಸೇರಿದ್ದರು ಎನ್ನಲಾಗಿದೆ.
ಎರಡು ದಿನ ಫೇಸ್‌ಬುಕ್‌ನಲ್ಲಿ ಹರಿದಾಡಿದ್ದ ಈ ಪೋಸ್ಟ್ ಅನ್ನು ನಂತರ ಡಿಲೀಟ್ ಮಾಡಲಾಗಿತ್ತು. ಈ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಭದ್ರತಾ ಸಂಸ್ಥೆಗಳು ಯಾತ್ರೆಗೆ ಬಿಗಿ ಭದ್ರತೆ ಒದಗಿಸಿವೆ. ಜತೆಗೆ ಈ ಪೋಸ್ಟ್ ಬಗ್ಗೆ ಬಗ್ಗೆ ಮಾಹಿತಿ ನೀಡುವಂತೆ ಫೇಸ್‌ಬುಕ್ ಮನವಿ ಮಾಡಿವೆ.