ರಾಂಚಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ರಾಜ್ಯದ ಸ್ವಚ್ಛ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಲು ನಿರಾಕರಿಸಿದ್ದಾರೆ.
ಈಗಾಗಲೇ ಧೋನಿ ಜಾರ್ಖಂಡ್ ಸರ್ಕಾರದ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದ್ದು ಅದರಿಂದ ಬೇಸರಗೊಂಡಿದ್ದಾರೆ. ಹೀಗಾಗಿ ಸ್ವಚ್ಚ ಭಾರತ್ ಅಭಯಾನದ ಬ್ರಾಂಡ್ ಅಂಬಾಸಿಡರ್ ಆಗುವ ಆಹ್ವಾನ ತಿರಸ್ಕರಿಸಿದ್ದಾರೆ. ಜೊತೆಗೆ ಜಾರ್ಖಂಡ್ ಪ್ರವಾಸೋದ್ಯಮ ಉನ್ನತೀಕರಣ ಪ್ರಸ್ತಾಪವನ್ನು ಸಹ ನಿರಾಕರಿಸಿದ್ದಾರೆ ಎಂದು, ಜಾರ್ಖಂಡ್ ರಾಜ್ಯ ಕುಡಿಯುವ ನೀರು ಸ್ವಚ್ಚತಾ ಇಲಾಖೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಇನ್ನು ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕ್ರಿಕೆಟ್ ಅಕಾಡೆಮಿಗೆ ಜಾರ್ಖಂಡ್ ಸರ್ಕಾರ ಜಮೀನು ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಧೋನಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ಧೋನಿ ಸ್ನೇಹಿತರೊಬ್ಬರು ತಿಳಿಸಿದ್ದಾರೆ.