ಬಾಲಕಿ ಆತ್ಯಹತ್ಯೆ(ಚಿತ್ರ ಕೃಪೆ: ಎಎನ್ಐ) 
ದೇಶ

ಮನೆಯಲ್ಲಿ ಶೌಚಾಲಯ ಕಟ್ಟಲು ಪೋಷಕರ ನಿರಾಕರಣೆ: ಬಾಲಕಿ ಆತ್ಮಹತ್ಯೆ

ಪೋಷಕರು ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿರಿಂದ ಮನನೊಂದ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ...

ಡುಮ್ಕಾ: ಪೋಷಕರು ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿರಿಂದ ಮನನೊಂದ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬರ್ಹಿದೆಸೆಗೆ ಹೋಗುವ ಅವಮಾನ ತಾಳಲಾರದೆ ಡುಮ್ಕಾದ ಎಎನ್‌ ಕಾಲೇಜಿನ ಮೊದಲ ವರ್ಷದ ಬಿಎ ವಿದ್ಯಾರ್ಥಿನಿ ಖುಷ್ಬು ಕುಮಾರಿ ಖುಷ್ಬು ಕುಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ನಾನಾ ರೀತಿಯಲ್ಲಿ ಪೋಷಕರನ್ನು ಕಾಡಿ ಬೇಡಿದ್ದಾಳೆ. ಆದರೆ ಪೋಷಕರು ಈ ಬಗ್ಗೆ ಆಸಕ್ತಿ ತೋರದ್ದರಿಂದ ಟುಮ್ಕಾದ ಗೋಶಾಲಾ ರಸ್ತೆಯಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

ಖುಷ್ಟುಳಾ ಮನೆ ನಾಲ್ಕು ಕೊಠಡಿಯಿಂದ ಸುಸಜ್ಜಿತವಾಗಿತ್ತು. ಇದರಿಂದಾಗಿ ಕುಟುಂಬ ಸದಸ್ಯರಿಗೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಅಗತ್ಯ ಎನಿಸಿಲ್ಲ. 'ಮನೆಯಲ್ಲೇ ಶೌಚಾಲಯ ನಿರ್ಮಿಸುವ ಬದಲು ಅದೇ ಹಣವನ್ನು ಆಕೆಯ ಮದುವೆಗೆ ಖರ್ಚು ಮಾಡಲು ಉಳಿತಾಯ ಮಾಡುತ್ತಿದ್ದೆ,'ಎಂದು ಆಕೆಯ ತಂದೆ ತ್ರಿಪಾಠಿ ಯಾದವ್‌ ಹೇಳಿದ್ದಾರೆ.

'ಮನೆಯಲ್ಲೇ ಶೌಚಾಲಯ ನಿರ್ಮಾಣ ಮಾಡಲು ಖುಷ್ಬು ಒತ್ತಾಯಿಸಿದ್ದಳು. ಆದರೆ, ನಾಲ್ಕು ಗೋಡೆ ನಿರ್ಮಿಸುವುದಾಗಿ ಹೇಳಿದ್ದೆವು. ಇದೇ ವಿಚಾರವಾಗಿ ವಾಗ್ವಾದ ನಡೆದಿತ್ತು, ಬಹಿರ್ದೆಸೆಗಾಗಿ ಆಗಾಗ ತಾತನ ಮನೆಗೆ ಹೋಗುತ್ತಿದ್ದಳು,' ಎಂದು ಖುಷ್ಬು ತಾಯಿ ಸಂಜು ದೇವಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!