ದೇಶ

3 ಶಂಕಿತ ಇಸಿಸ್ ಉಗ್ರರನ್ನು ಬಂಧಿಸಿದ ಪಾಕಿಸ್ತಾನ ಭದ್ರತಾ ಪಡೆ

Vishwanath S

ಲಾಹೋರ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಮ್ಮ ಪ್ರಾಭಲ್ಯ ಸ್ಥಾಪಿಸಲು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊಂಚು ಹಾಕುತ್ತಿದ್ದು, ಮೂವರು ಇಸ್ಲಾಮಿಕ್ ಸ್ಟೇಟ್‌ ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಭದ್ರತಾ ಪಡೆಗಳು ಹೇಳಿವೆ.

ಬಂಧಿತರಲ್ಲಿ ಇಬ್ಬರು ಆಫ್ಗಾನಿಸ್ತಾನದವರಾಗಿದ್ದು ಅವರನ್ನು ಅಸ್ಮತುಲ್ಲಾಹ್ ಹಾಗೂ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಪಾಕಿಸ್ತಾನದ ಪಂಜಾಬ್‌ ಪಾಂತ್ಯದ ಮುಹಮ್ಮದ್‌ ಇಬ್ರಾಹೀಂ ಎಂದು ಪೊಲೀಸ್ ಮೂಲಗಳು ಹೇಳಿವೆ.

ಶಂಕಿತರ ದೂರವಾಣಿ ಕರೆಯೊಂದನ್ನು ಗುಪ್ತಚರ ಸಂಸ್ಥೆಗಳು ಕದ್ದಾಲಿಸಿದಾಗ ವಿಷಯ ತಿಳಿದುಬಂದಿದ್ದು ನಂತರ ಅವರ ಅಡಗುತಾಣದ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಐಎಸ್‌ ಮುಖಂಡರ ಲಿಂಕ್‌ಗಳು, ಪಂಜಾಬ್‌ ಪ್ರಾಂತ್ಯದ ಸೂಕ್ಷ್ಮ ಕಟ್ಟಡಗಳ ನಕ್ಷೆಗಳಿದ್ದ ಲ್ಯಾಪ್‌ಟ್ಯಾಪ್‌ಗಳು ಹಾಗೂ ಐಎಸ್‌ ಸಾಹಿತ್ಯವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವು ಹೇಳಿವೆ. ಇಬ್ಬರು ಶಂಕಿತರನ್ನು ವಿಚಾರಣೆಗಾಗಿ ರಹಸ್ಯ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.

SCROLL FOR NEXT