ನವದೆಹಲಿ : ದೇಶದ ಎಲ್ಲ ಸರ್ಕಾರಿ, ಖಾಸಗಿ ವಿಶ್ವ ವಿದ್ಯಾಲಯಗಳು, ಕಾಲೇಜುಗಳ ಮ್ಯಾಪ್ ವೊಂದನ್ನು ಸಿದ್ಧಪಡಿಸುವಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್‍ಆರ್ ಡಿ) ¸ ಸಚಿವಾಲಯ ಯಶಸ್ವಿಯಾಗಿದೆ. ``ನಿಮ್ಮ ಕಾಲೇಜನ್ನು ಅರಿತುಕೊಳ್ಳಿ'' ಎನ್ನುವ ಆಂದೋಲದ ಭಾಗವಾಗಿ ಎಚ್‍ಆರ್ ಡಿ ಸಚಿವಾಲಯ ಈ ಮ್ಯಾಪ್ ಸಿದ್ಧಪಡಿಸಿದೆ. ಇದನ್ನು ಬಳಸಿಕೊಂಡು ಪೋಷಕರು ಹಾಗೂ ವಿದ್ಯಾರ್ಥಿಗಳು ಸರಿಯಾದ ಕಾಲೇಜುಗಳನ್ನು ಆಯ್ಕೆ ಮಾಡಬಹುದಾಗಿದೆ. ಈ ಕಾಲೇಜುಗಳ ಎಲ್ಲ ವಿವರ ಗಳು ಎಚ್‍ಆರ್ ಡಿ ಸಚಿವಾಲಯದ WWW.Knowyourcollege-gov.in- ನಲ್ಲಿ ಸಿಗಲಿದೆ. ಇದಲ್ಲಿ ಆಯಾ ಕಾಲೇಜುಗಳಲ್ಲಿರುವ ಕೋಸ್ರ್ ಗಳು, ಶಿಕ್ಷಕರು, ಲ್ಯಾಬ್‍ಗಳು, ಲೈಬ್ರೆರಿ, ಮೂಲ ಸೌಲಭ್ಯ ಹಾಗೂ ಹಾಸ್ಟೆಲ್ ಗಳ ಲಭ್ಯತೆ ಕುರಿತೂ ಇಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿರಲಿದೆ. ವಿದ್ಯಾರ್ಥಿಗಳು, ಶಿಕ್ಷಕರು ಈ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.