ನವದೆಹಲಿ: ಕಳೆದ ವರ್ಷದ ಗಾಜಾ ಸಂಘರ್ಷಕ್ಕೆ ಸಂಬಂಧಿಸಿ ಇಸ್ರೇಲ್ ಅನ್ನು ಖಂಡಿಸುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿರ್ಣಯಕ್ಕೆ ಸಂಬಂಧಿಸಿದ ಮತದಾನದಿಂದ ಭಾರತ ಹೊರಗುಳಿದಿದೆ.
ವಿಶ್ವಸಂಸ್ಥೆಯ ತನಿಖಾ ಆಯೋಗದ ವರದಿಯನ್ನು ಆಧರಿಸಿ ನಿರ್ಣಯ ಮಂಡಿಸಲಾಗಿತ್ತು. 41 ದೇಶಗಳು ನಿರ್ಣಯದ ಪರ ಮತಹಾಕಿದರೆ, ಅಮೆರಿಕ ಮಾತ್ರ ವಿರುದ್ಧವಾಗಿ ನಿಂತಿತ್ತು.
ಭಾರತ, ಕೀನ್ಯಾ, ಇಥಿಯೋಪಿಯಾ, ಪರುಗ್ವೆ ಮತ್ತು ಮೆಸೆಡೋನಿಯಾ ಮತದಾನದಿಂದ ದೂರ ಉಳಿದಿದ್ದವು. ಯಾವತ್ತೂ ಪ್ಯಾಲೆಸ್ತೀನ್ ಪರವಾಗಿ ನಿಲ್ಲುತ್ತಿದ್ದ ಭಾರತ ಗಾಜಾ ವಿಚಾರಕ್ಕೆ ಸಂಬಂಧಿಸಿ ತಟಸ್ಥ ನಿಲುವು ಪ್ರದರ್ಶಿ ಸುತ್ತಿರುವುದು ಇದೇ ಮೊದಲು.