ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 
ದೇಶ

ಬಿಜೆಪಿಗಿಂತ ದೊಡ್ಡ ಜಾತಿವಾದಿ, ಕೋಮುವಾದಿ ಮತ್ತೊಂದಿಲ್ಲ: ನಿತೀಶ್ ಕುಮಾರ್

ದೇಶದಲ್ಲಿ ಬಿಜೆಪಿಗಿಂತ ದೊಡ್ಡ ಜಾತಿವಾದಿ ಹಾಗೂ ಕೊಮುವಾದಿ ಮತ್ತೊಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ...

ಪಾಟ್ನ: ದೇಶದಲ್ಲಿ ಬಿಜೆಪಿಗಿಂತ ದೊಡ್ಡ ಜಾತಿವಾದಿ ಹಾಗೂ ಕೊಮುವಾದಿ ಮತ್ತೊಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಾತಿ ಆಧಾರಿತ ಜನಗಣತಿ ನಡೆಸುತ್ತಿದೆ. ಆದರೆ, ಈ ಕುರಿತ ಫಲಿತಾಂಶವನ್ನು ಸಾರ್ವಜನಿಕರಿಗೆ ತಿಳಿಸುತ್ತಿಲ್ಲ.  ಜಾತಿ ಆಧಾರಿತ ಜನಗಣತಿ ಫಲಿತಾಂಶವನ್ನು ಸರ್ಕಾರ ಜನರಿಂದ ಮುಚ್ಚಿಡುತ್ತಿದೆ ಎಂದು ಹೇಳಿದ್ದಾರೆ.

ವೋಟ್ ಬ್ಯಾಂಕ್ ಕುರಿತಂತೆ ಮಾತನಾಡುವ ಪಕ್ಷವೇ ಇಂದು ಜಾತಿವಾದ ಹಾಗೂ ಕೋಮುವಾದಗಳನ್ನು ಮಂಡಿಸುತ್ತಿದೆ. ಬಿಜೆಪಿಗಿಂತ ದೊಡ್ಡ ಜಾತಿವಾದಿ ಹಾಗೂ ಕೋಮುವಾದಿ ಮತ್ತೊಂದಿಲ್ಲ. ಜಾತಿ ಆಧಾರಿತ ಜನಗಣತಿ ಮಾಡುವ ಸರ್ಕಾರ ಅದರಿಂದ ಬಂದ ಫಲಿತಾಂಶವನ್ನು ಜನರಿಗೆ ತಿಳಿಸಬೇಕು. ಸರ್ಕಾರದ ಈ ವರ್ತನೆಯಿಂದಲೇ ತಿಳಿಯಬಹುದು ಜಾತಿ ಆಧಾರಿತ ಜನಗಣತಿ ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದನ್ನು ಎಂದು ನಿತೀಶ್ ಕುಮಾರ್ ಮೋದಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸಹ ಜಾತಿ ಆಧಾರಿತ ಜನಗಣತಿ ಕುರಿತಂತೆ ಮೋದಿ ವಿರುದ್ಧ ಕಿಡಿಕಾರಿದ್ದರು. ಜಾತಿ ಜನಗಣತಿ ಫಲಿತಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕಾದದ್ದು ಸರ್ಕಾರದ ಕರ್ತವ್ಯ. ಮಾಹಿತಿ ಕೇಳುವ ಹಾಗೂ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗಿದೆ ಎಂದು ಹೇಳಿದ್ದರು.

ಜಾತಿ ಆಧಾರಿತ ಜನಗಣತಿ ಇದೀಗ ಕೇಂದ್ರದಲ್ಲಿ ಪ್ರತಿಪಕ್ಷಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!