ಜೈಪುರ: ಕಾರು ಅಪಘಾತಕ್ಕೆ ಮೃತ ಬಾಲಕಿಯ ತಂದೆ ಟ್ರಾಫಿಕ್ ನಿಯಮ ಪಾಲನೆ ಮಾಡದಿರುವುದೇ ಕಾರಣ ಎಂದು ಬಿಜೆಪಿ ಸಂಸದೆ ಹೇಮಮಾಲಿನಿ ಟ್ವೀಟ್ ಗೆ ಕಟುವಾಗಿ ಟೀಕಿಸಿರುವ ಬಾಲಕಿಯ ತಂದೆ ಹನುಮಾನ್ ಮಹಾಜನ್, ಸಂಸದೆ ಹೇಮಾಜಿ ಸಣ್ಣ ಮನಸ್ಸು ಹೊಂದಿರುವ ಬಗ್ಗೆ ನನಗೆ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಬಾಲಕಿ ತಂದೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೊಡ್ಡ ವ್ಯಕ್ತಿಗಳು ಎಲ್ಲಿಂದ ಬೇಕಾದರೂ ಏನನ್ನಾದರೂ ಹೇಳಬಹುದು. ಅವರಿಗೆ ಧೈರ್ಯವಿದ್ದರೆ ನನ್ನ ಎದುರು ಬಂದು ಆ ಮಾತು ಹೇಳಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ.
ನಾನು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದೇನೆಂದು ಹೇಮಾಮಾಲಿನಿ ಅವರು ಆರೋಪಿಸಿದ್ದಾರೆ. ಅವರಿಂದಲೇ ತಿಳಿಯ ಬಯಸುತ್ತೇನೆ ಯಾರು ವೇಗವಾಗಿ ಕಾರು ಚಲಾಯಿಸುತ್ತಿದ್ದರು, ಯಾರು ರಾಂಗ್ ಸೈಡ್‌ನಲ್ಲಿ ಬಂದರು. ಅಥವಾ ನಾನು ಇಂಡಿಕೇಟರ್ ಹಾಕಿರಲಿಲ್ಲವೇ, ಅಥವಾ ನಾನು ಸೀಟ್ ಬೆಲ್ಟ್ ಹಾಕಿರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.