ದೇಶ

ಜಮತ್ ಉದ್ ದವಾ ಮೇಲೆ ನಿಷೇಧ ಹೇರಿಲ್ಲ: ಪಾಕಿಸ್ತಾನ ಸಚಿವ

ಇಸ್ಲಾಮಾಬಾದ್: ಜಮತ್ ಉದ್ ದವಾ ಸಂಘಟನೆಯ ಮೇಲೆ ನಿಷೇಧ ಹೇರಿಲ್ಲ. ಬದಲಾಗಿ ಸಂಘಟನೆ ಮೇಲೆ ಸರ್ಕಾರ ಕಣ್ಗಾವಲಿಸಿರಿಸಿದೆ ಎಂದು ಪಾಕಿಸ್ತಾನ ಸಚಿವ ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿಖಾನ್ ಅವರು, ಜೆಯುಡಿ ಸಂಘಟನೆ ಮೇಲೆ ಸರ್ಕಾರ ಕಣ್ಗಾವಲಿರಿಸಿದೆಯೇ ಹೊರತು ಸಂಘಟನೆಗೆ ದೇಶದಲ್ಲಿ ನಿಷೇಧ ಹೇರಿಲ್ಲ. ಜೆಯುಡಿ ಸಂಘಟನೆಯು ಸಾಮಾಜಿಕ ಕೆಲಸ, ಆಸ್ಪತ್ರೆ, ಶಾಲೆ, ಆ್ಯಂಬುಲೆನ್ಸ್ ಸೇವೆ ಮತ್ತು ಇತರೆ ಧರ್ಮ ಪ್ರಚಾರ ಸಂಸ್ಥೆಗಳನ್ನು ನಡೆಸುತ್ತಿದೆ.

ಎಲ್ ಇಟಿ ಉಗ್ರ ಸಂಘಟನೆ ಹಾಗೂ ಜೆಯುಡಿ ಸಂಘಟನೆಗಳು ಸಂಯೋಜನೆಗೊಂಡಿದ್ದು, ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದೆ ಎಂದು ಭಾರತ ಮತ್ತು ಅಮೆರಿಕದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಕುರಿತಂತೆ ಯಾವುದೇ ದಾಖಲೆಗಳನ್ನು ಪಾಕಿಸ್ತಾನಕ್ಕೆ ಒದಗಿಸಲಾಗಿಲ್ಲ. ಹಾಗಾಗಿ ಜೆಯುಡಿ ಸಂಘಟನೆ ಮೇಲೆ ದೇಶದಲ್ಲಿ ನಿಷೇಧ ಹೇರಲಾಗಿಲ್ಲ. ಬದಲಾಗಿ ಸೆಕ್ಷನ್ 11ಡಿ (ಉಗ್ರ ನಿಗ್ರಹ ಕಾಯ್ದೆ) ಅಡಿಯಲ್ಲಿ ಸರ್ಕಾರ ಸಂಘಟನೆ ಮೇಲೆ ಕಣ್ಗಾವಲಿರಿಸಿದೆ ಎಂದು ಹೇಳಿದ್ದಾರೆ.

ಸಂಘಟನೆಗಳು ಈಗಾಗಲೇ ಕಾನೂನು ಬದ್ಧವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಒಂದು ವೇಳೆ ಸಂಘಟನೆಗಳು ಸೆಕ್ಷನ್ 11 ಡಿ ಕಾಯ್ದೆ ವಿರುದ್ಧವಾಗಿ ನಡೆದುಕೊಂಡಿದ್ದೇ ಆದರೆ ಸಂಘಟನೆ ಮೇಲೆ ಮುಂದಿನ ದಿನಗಳಲ್ಲಿ ನಿಷೇಧ ಹೇರಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT