ಅಮರನಾಥ್ ಯಾತ್ರೆ 
ದೇಶ

ಭಾರೀ ಮಳೆ, ಕೆಟ್ಟ ಹವಾಮಾನ: ಅಮರನಾಥ್ ಯಾತ್ರೆ ಸ್ಥಗಿತ

ಭಾರೀ ಮಳೆ ಹಾಗೂ ಕೆಟ್ಟ ಹವಾಮಾನದ ಪರಿಣಾಮ ದಕ್ಷಿಣ ಕಾಶ್ಮೀರದ ಪಹಲ್ಲಮ್ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗದಲ್ಲಿ ಸಂಚಾರ...

ಶ್ರೀನಗರ: ಭಾರೀ ಮಳೆ ಹಾಗೂ ಕೆಟ್ಟ ಹವಾಮಾನದ ಪರಿಣಾಮ ದಕ್ಷಿಣ ಕಾಶ್ಮೀರದ ಪಹಲ್ಲಮ್ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಅಮರನಾಥ್ ಯಾತ್ರೆ ಸ್ಥಗಿತಗೊಳಿಸಲಾಗಿದೆ.

ಬೆಳಗ್ಗಿನಿಂದಲೇ ಕಣಿವೆ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಮರನಾಥ ಯಾತ್ರಿಗಳನ್ನು ಬಲ್ತಾಲ್ ಹಾಗೂ ಪಹಲ್ಲಮ್ ಶಿಬಿರಗಳಲ್ಲೇ ಉಳಿಸಲಾಗಿದೆ. ಹವಾಮಾನ ಸುಧಾರಣೆಯ ನಂತರವಷ್ಟೇ ಯಾತ್ರೆ ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಗಳ ಪವಿತ್ರ ಸ್ಥಳವಾಗಿರುವ ಅಮರನಾಥ್ ಹಿಮಲಿಂಗದ ದರ್ಶನ ಪಡೆಯಲು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಈ ಮಾರ್ಗದಲ್ಲಿ ತೆರಳುತ್ತಿದ್ದಾರೆ. ಎಲ್ಲ ಭಕ್ತರಿಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮಹಿಳೆ ಫೋಟೋ ಮಾರ್ಫ್ ಮಾಡಿ ಪ್ರಧಾನಿ ಮೋದಿ ಫೋಟೋದೊಂದಿಗೆ ಪ್ರದರ್ಶನ: CJP ವಿರುದ್ಧ FIR ದಾಖಲು

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ