ಸುನಿಲ್ ಪಾಂಡೆ 
ದೇಶ

ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ ಪ್ರಕರಣ: ಜೆಡಿಯು ಶಾಸಕ ಸುನಿಲ್ ಪಾಂಡೆ ಬಂಧನ

ಆರಾ ಕೋರ್ಟ್ ಆವರಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಿಹಾರ ಆಡಳಿತರೂಢ ಪಕ್ಷ ಜೆಡಿಯುನ ಶಾಸಕ ಸುನಿಲ್ ಪಾಂಡೆ ಅವರನ್ನು...

ಪಾಟ್ನಾ: ಆರಾ ಕೋರ್ಟ್ ಆವರಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಿಹಾರ ಆಡಳಿತರೂಢ ಪಕ್ಷ ಜೆಡಿಯುನ ಶಾಸಕ ಸುನಿಲ್ ಪಾಂಡೆ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಲು ತೆರಳಿದ್ದ ಭೋಜಪುರ್ ಜಿಲ್ಲೆಯ ತರರಿ ಶಾಸಕ ಪಾಂಡೆಯನ್ನು ಇಂದು ಪೊಲೀಸರು ವಶಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೆಡಿಯು ಶಾಸಕರ ಬಂಧನವನ್ನು ಖಚಿತಪಡಿಸಿರುವ ಎಸ್‌ಪಿ ನವೀನ್‌ಚಂದ್ ಜಾಹ್ ಅವರು, ಸುನಿಲ್ ಪಾಂಡೆ ಅವರನ್ನು ವಿಚಾರಣೆಗಾಗಿ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಜನವರಿ 23ರಂದು ಪೊಲೀಸರಿಂದ ಬಂಧಿತ ಆರೋಪಿಯನ್ನು ಎಸ್ಕೇಪ್ ಮಾಡುವ ಉದ್ದೇಶದಿಂದ ಕೋರ್ಟ್ ಆವರಣದಲ್ಲೇ ಬಾಂಬ್ ಸ್ಫೋಟಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಯುದ್ಧ ಅಂತ್ಯ; ಭಾನುವಾರ ಶಾಂತಿ ಒಪ್ಪಂದಕ್ಕೆ ಸಹಿ, Hormuz ಎಲ್ಲರಿಗೂ ಮುಕ್ತ : ಅಮೆರಿಕ ಅಧ್ಯಕ್ಷ Donald Trump ಘೋಷಣೆ

1st ODI: Shubman Gill, KL ರಾಹುಲ್ ಸ್ಫೋಟಕ ಬ್ಯಾಟಿಂಗ್, ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ

ಕೊನೆಗೂ 131 ದಿನಗಳ ಬಳಿಕ ಇರಾನ್ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ನಿಗದಿ, ಯಾವಾಗ?

1st ODI: ಆಫ್ಘನ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಕೊಹ್ಲಿ, ಧವನ್ ರೆಕಾರ್ಡ್ ಪತನ, ಈ ದಾಖಲೆ ಮಾಡಿದ ಮೊದಲ ಆಟಗಾರ Shubman Gill

TMC ಅಂತರ್ಯುದ್ಧ: ಸಂಸದೆ ಸತಾಬ್ದಿ ರಾಯ್ ಜೊತೆ ಸೇರಿ ಬಿಜೆಪಿ ನಾಯಕರನ್ನು ಭೇಟಿಯಾದ 20ನೇ ಬಂಡಾಯ ಸಂಸದ ಸುದೀಪ್!

SCROLL FOR NEXT