ವ್ಯಾಪಂ ಹಗರಣ ವಿರೋಧಿಸಿ ಆಮ್ ಆದ್ಮಿ ಪಕ್ಷ ಭೂಪಾಲ್ ಯಲ್ಲಿ ನಡೆಸಿದ ಪ್ರತಿಭಟನೆ (ಸಂಗ್ರಹ ಚಿತ್ರ) 
ದೇಶ

ಮಂತ್ರಿ ಜತೆ ಮಂತ್ರಾಣಿ ವ್ಯಾಪಂಗೆ ಹೊಸ ಟ್ವಿಸ್ಟ್

ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಈಗ ಕುತೂಹಲಕಾರಿ ತಿರುವು ಸಿಕ್ಕಿದೆ. ಮಂತ್ರಾಣಿ ಎಂಬ ಹೊಸಪಾತ್ರ ಪ್ರಹಸನಕ್ಕೆ ಅಚ್ಚರಿಯ ಎಂಟ್ರಿ ನೀಡಿದ್ದು, ಪ್ರಕರಣ ಮಹತ್ವದ ಟ್ವಿಸ್ಟ್ ಪಡೆದಿದೆ...

ನವದೆಹಲಿ: ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಈಗ ಕುತೂಹಲಕಾರಿ ತಿರುವು ಸಿಕ್ಕಿದೆ. ಮಂತ್ರಾಣಿ ಎಂಬ ಹೊಸಪಾತ್ರ ಪ್ರಹಸನಕ್ಕೆ ಅಚ್ಚರಿಯ ಎಂಟ್ರಿ ನೀಡಿದ್ದು, ಪ್ರಕರಣ ಮಹತ್ವದ ಟ್ವಿಸ್ಟ್  ಪಡೆದಿದೆ.

ವಿಶೇಷ ಪೊಲೀಸ್ ಕಾರ್ಯಪಡೆ ಸಿದ್ಧಪಡಿಸಿರುವ ಎಫ್ಐಆರ್ನಲ್ಲಿ ಹಿಂದಿ ಅಕ್ಷರದಲ್ಲಿ ಬರೆದಿರುವ ``ಮಂತ್ರಾಣಿ'' ಎಂಬ ಕೋಡ್ ವರ್ಡ್ ಕಾಣಿಸಿರುವುದಾಗಿ ಎನ್ ಡಿಟಿವಿ ವಿವದಿ ಮಾಡಿದೆ. ಪ್ರಕರಣದ ಆರೋಪಿಗಳಾಗಿದ್ದ ಪಂಕಜ್ ತ್ರಿವೇದಿ ಮತ್ತು ನಿತಿನ್ ಮೋಹಿಂದ್ರ ಮಾಹಿತಿಗಳನ್ನು ಹೊರಗೆಳೆದಾಗ ಈ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ.

ತ್ರಿವೇದಿಗೆ ಸೇರಿದ್ದ ಕಂಪ್ಯೂಟರ್ ನಿಂದ ಎಕ್ಸೆಲ್ ಫೈಲುಗಳನ್ನು ತೆರೆದು, ವೈದ್ಯ ಸೀಟುಗಳ ಖರೀದಿ, ಮಾರಾಟದಲ್ಲಿ ಭಾಗಿಯಾದವರ ಪಟ್ಟಿ ಹೊರತೆಗೆದಾಗ, ಮಂತ್ರಾಣಿ ಹೆಸರು ಕಾಣಿಸಿದ್ದು, ಈ ಬಗ್ಗೆ ಎಸ್ ಟಿಎಫ್ ಪ್ರಶ್ನಿಸಿದಾಗ ತ್ರಿವೇದಿ ಹಾರಿಕೆ ಉತ್ತರ ನೀಡಿದ್ದಾರೆ.

``ಮಂತ್ರಾಣಿ'' ಅಂದರೆ ಮಹಿಳಾ ಸಚಿವೆ ಇದ್ದರೂ ಇರಬಹುದು ಅಥವಾ ಸಚಿವರೊಬ್ಬರ ಪತ್ನಿಯೂ ಆಗಿರಬಹುದು ಎಂಬ ಅಸ್ಪಷ್ಟ ಪ್ರತಿಕ್ರಿಯೆ ನೀಡಿದರೆಂದು ತನಿಖಾ ವರದಿಯಲ್ಲಿ ಬರೆಯಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಶಿಕ್ಷಣ ಸಚಿವ ಲಕ್ಷ್ಮೀಕಾಂತ್ ಶರ್ಮಾ ಬಂಧನಕ್ಕೊಳಗಾಗಿದ್ದಾರೆ. ಈಗ ಮಂತ್ರಾಣಿ ಹೆಸರು ಕೇಳಿ ಬಂದಿರುವುದು ಕುತೂಹಲ ಮೂಡಿ ಸಿದೆ. ``ಮಂತ್ರಾಣಿ '' ಹೆಸರಿಂದಾಗಿ ಈಗ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಸಿಎಂ ಚೌಹಾಣ್ರನ್ನು ಹಣಿಯಲು ಹೊಸ ಅಸ್ತ್ರ ಸಿಕ್ಕಂತಾಗಿದೆ. ಎಫ್ಐಆರ್ ನಲ್ಲಿ ಪ್ರಸ್ತಾಪವಾಗಿದ್ದರೂ ಇಷ್ಟು ದಿನ ಆ ಹೆಸರನ್ನು ಬಹಿರಂಗಗೊಳಿಸದೇ ಇರುವುದಕ್ಕೆ ವಿವರಣೆ ನೀಡುವಂತೆ ಪಟ್ಟು ಹಿಡಿದಿವೆ.

ಎಸ್ ಟಿಎಫ್ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ. ಆಯ್ದ ವ್ಯಕ್ತಿಗಳ ವಿರುದ್ಧವಷ್ಟೇ ತನಿಖೆ ನಡೆಸುತ್ತಿದೆ. ಅರಣ್ಯ ರಕ್ಷಕರ ನೇಮಕ ಹಗರಣ ಸಂಬಂಧ ಪಂಕಜ್ ತ್ರಿವೇದಿ ಅವರು ಮಂತ್ರಾಣಿ, ಸಚಿವರೊಬ್ಬರ ಪತ್ನಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಷ್ಟಾದರೂ ಎಸ್ ಟಿಎಫ್ ಅವರು ಯಾರೆಂದು ಕಂಡುಹಿಡಿವ ಗೊಡವೆಗೇ ಹೋಗಿಲ್ಲ.
- ಕೆ.ಕೆ. ಮಿಶ್ರಾ, ಕಾಂಗ್ರೆಸ್ ವಕ್ತಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!